ಸಮಸ್ಯೆ ಇತ್ಯರ್ಥಕ್ಕಾಗಿ ಇಬ್ರಾಹಿಂ ನೇತೃತ್ವದಲ್ಲಿ ಸಭೆ: ಕಾರ್ಪೊರೇಟರ್‌ಗಳ ನಡುವೆ ಮಾರಾಮಾರಿ

ಶನಿವಾರ, 3 ಅಕ್ಟೋಬರ್ 2015 (14:58 IST)
ಹಬ್ಬದ ವೇಳೆ ನಡೆದಿದ್ದ ಗುಂಪು ಘರ್ಷಣೆ ಇತ್ಯರ್ಥ ಸಂಬಂಧವಾಗಿ ಮಾತುಕತೆ ನಡೆಸಲೆಂದು ಸಭೆ ಸೇರಿದ್ದ ವೇಳೆ ಬೆಳಗಾವಿ ಪಾಲಿಕೆಯ ಇಬ್ಬರು ಮಾಜಿ ಹಾಗೂ ಹಾಲಿ ಕಾರ್ಪೊರೇಟರ್‌ಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ರಾಜ್ಯದ ಯೋಜನಾ ಆಯೋಗದ ಉಪಾಧ್ಯಕ್ಷ ಸಚಿವ ಸಿ.ಎಂ. ಇಬ್ರಾಹಿಂ ಅವರ ಸಮ್ಮುಖದಲ್ಲಿಯೇ ಇಂದು ನಡೆದಿದೆ. 
 
ನಗರದ ಅಜಾದ್ ನಗರದ ಮಾಜಿ ಕಾರ್ಪೊರೇಟರ್ ಆದ ಫಿರ್ದೋಸ್ ಹಾಗೂ ಹಾಲಿ ಕಾರ್ಪೊರೇಟರ್‌ರಾದ ಮತೀನ್ ಶೇಕ್ ಅಲಿ ಅವರ ಹಾಗೂ ಅವರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. 
 
ಪ್ರಕರಣದ ಹಿನ್ನೆಲೆ: ಈ ಹಿಂದೆ ಗಣೇಶನ ಹಬ್ಬ ಆಚರಿಸುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆ ಘರ್ಷಣೆ ವಿವಾದವನ್ನು ಬಗೆಹರಿಸಲೆಂದು ಇಂದು ಇಬ್ರಾಹಿಂ ನೇತೃತ್ವದಲ್ಲಿ ಸಭೆ ಸೇರಿದ್ದರು. ಈ ವೇಳೆ ಇಬ್ಬರೂ ಕಾರ್ಪೊರೇಟರ್‌ಗಳ ನಡುವೆ ವಾಗ್ವಾದ ಏರ್ಪಟ್ಟು ಕೈ ಕೈ ಮಿಲಾಯಿಸಿಕೊಂಡಿದ್ದರೆ. ಅಲ್ಲದೆ ಅವರವರ ಬೆಂಬಲಿಗರ ನಡುವೆಯೂ ಕೂಡ ಹೊಡೆದಾಟ ನಡೆದಿದೆ.  
 
ಇನ್ನು ಘಟನೆ ಹಿನ್ನೆಲೆಯನ್ನು ತಿಳಿದ ನಗರದ ಮಾರುಕಟ್ಟೆ ಠಾಣೆ ಪೊಲೀಸರು, ಸ್ಥಳಕ್ಕಾಗಮಿಸಿ ಮಧ್ಯಪ್ರವೇಶಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ