ಮೇಕೆದಾಟು ಯೋಜನೆಗೆ ತಮಿಳುನಾಡಿನ ಪ್ರತಿಭಟನೆ ರಾಜಕೀಯಪ್ರೇರಿತ : ದೇವೇಗೌಡ

ಭಾನುವಾರ, 29 ಮಾರ್ಚ್ 2015 (19:16 IST)
ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ತಮಿಳುನಾಡಿನ ಪ್ರತಿಭಟನೆ ರಾಜಕೀಯಪ್ರೇರಿತ ಎಂದು  ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ. ಮೇಕೆದಾಟಿಗೆ ಭೇಟಿ ನೀಡಿದ್ದ ಅವರು  ನೀರಿನ ಸಮರ್ಪಕ ಬಳಕೆ ಯೋಜನೆಯ ಉದ್ದೇಶವಾಗಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ  ಸಮಗ್ರ ವರದಿ ಪಡೆಯಲು 25 ಕೋಟಿ ರೂ. ಖರ್ಚಾಗಿದೆ. ವರದಿ ಬಂದ ನಂತರವಷ್ಟೇ ಯೋಜನೆ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ತಮಿಳುನಾಡು ರಾಜಕೀಯ ಪ್ರೇರಿತ ಬಂದ್ ಆಚರಿಸಿದೆ. ಕನಕಪುರ ತಾಲೂಕು ಮೇಕೆದಾಟುವಿನ ಬಳಿ ಹೇಳಿಕೆ ನೀಡಿದ ದೇವೇಗೌಡರು ಸಮುದ್ರಕ್ಕೆ ಹೋಗುವ ನೀರಿನ ಸದ್ಭಳಕೆಗೆ ಈ ಯೋಜನೆ ರೂಪಿಸಲಾಗಿದೆ ಎಂದರು.  ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಭಾಗಗಳಿಗೆ ನೀರೊದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.  ಯೋಜನೆ ಬಗ್ಗೆ ಸಮಗ್ರ ವರದಿಗೆ ರಾಜ್ಯಸರ್ಕಾರ ಸೂಚನೆ ನೀಡಿದ್ದು, ವಿದೇಶಿ ಕಂಪನಿಗೆ ಯೋಜನೆಯ ವರದಿ ನೀಡುವ ಹೊಣೆ ವಹಿಸಲಾಗಿದೆ.

 ವರದಿ ಬಂದ ಬಳಿಕವಷ್ಟೇ ಎಷ್ಟು ಕೋಟಿ ಖರ್ಚಾಗುತ್ತದೆಂದು ತಿಳಿದುಬರುತ್ತದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು. ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಹಿನ್ನೆಲೆಯಲ್ಲಿ ಸ್ಥಳಪರಿಶೀಲನೆಗೆ ಅವರು ಇಲ್ಲಿಗೆ ಬಂದಿದ್ದಾಗಿ ಹೇಳಿದರು. 

ವೆಬ್ದುನಿಯಾವನ್ನು ಓದಿ