ಹಿಂದೊಮ್ಮೆ ಕನ್ನಡಿಗರಿಗೆ ಚಪ್ಪಲಿ ಎತ್ತಿದವರೀಗ ಬೆಳಗಾವಿ ಮೇಯರ್

ಭಾನುವಾರ, 6 ಮಾರ್ಚ್ 2016 (16:18 IST)
ಹಿಂದೊಮ್ಮೆ ಕನ್ನಡಿಗರಿಗೆ ಚಪ್ಪಲಿ ತೋರಿಸಿದವರೀಗ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
 
2010ರಲ್ಲಿ ಕನ್ನಡಿಗ ನಿಂಗಪ್ಪ ನಿರ್ವಾಣಿ ಮೇಯರ್ ಆಗಿ ಆಯ್ಕೆಯಾಗಿದ್ದಾಗ ಎಂಇಎಸ್ ಸಾಮಾನ್ಯ ಸದಸ್ಯರಾಗಿದ್ದ ಸವಿತಾ ಪಾಟೀಲ್ ಮತ್ತು ಆಕೆಯ ಸಹಚರರು ಚಪ್ಪಲಿ ಎತ್ತಿ ತೋರಿಸಿ ಅವಮಾನಿಸಿದ್ದರು. ಅವರೇ ಈಗ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದು ಎಂಇಎಸ್ ಪುಂಡಾಟಿಕೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. 
 
ಆಯ್ಕೆಯಾದ ತಕ್ಷಣ ಯಾವುದೇ ಕಾರಣಕ್ಕೂ ಗಡಿ ವಿಚಾರಕ್ಕೆ ರಾಜಕಾರಣ ಮಾಡುವುದಿಲ್ಲ ಎಂದಿದ್ದ ಸವಿತಾ ಪಾಟೀಲ್ ಅಧಿಕಾರ ಸ್ವೀಕರಿಸಿದ ತಕ್ಷಣ ಮೊದಲು ಭೇಟಿಯಾಗಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು. ಸವಿತಾ ಪಾಟೀಲ್ ಫಡ್ನವೀಸ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಬಂದದ್ದು ಕನ್ನಡಿಗರನ್ನು ಕೆರಳಸಿದೆ. 
 
ಕನ್ನಡ ಭಾಷೆ ಮತ್ತು ಕನ್ನಡಿಗರ ಪರ ವಿರೋಧಿ ಧೋರಣೆಯನ್ನು ಹೊಂದಿರುವ ಸವಿತಾ ಪಾಟೀಲ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಕೈಗೊಂಡಿದ್ದು ಬೆಳಗಾವಿಯನ್ನು ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿವೆ. 

ವೆಬ್ದುನಿಯಾವನ್ನು ಓದಿ