ಪಾಲಿಕೆ ನಿರ್ಲಕ್ಷ್ಯ: 30 ಲಕ್ಷದ ಅಂಬೇಡ್ಕರ್ ಪ್ರತಿಮೆ ಧೂಳಿನಲ್ಲಿ...?!

ಶನಿವಾರ, 28 ಮಾರ್ಚ್ 2015 (09:35 IST)
ಇಲ್ಲಿನ ಮಹಾನಗರ ಪಾಲಿಕೆಯ ಮುಂಭಾಗ ಉದ್ಯಾನದಲ್ಲಿ ನಿರ್ಮಾಣವಾಗಬೇಕಿದ್ದ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯು ಪೊಲೀಸ್ ಇಲಾಖೆಯ ಕೊಠಡಿಯೊಂದರಲ್ಲಿ ಧೂಳಿಡಿದು ಮೂಲೆ ಸೇರಿದೆ. 
 
ಈ ಪ್ರತಿಮೆಯನ್ನು ಕಳೆದ ಒಂಬತ್ತು ತಿಂಗಳ ಹಿಂದೆಯೇ ತರಿಸಲಾಗಿದ್ದರೂ ಕೂಡ ಇಲ್ಲಿಯವರೆಗೂ ಅದನ್ನು ಅನುಷ್ಠಾನ ಮಾಡದಿರುವುದು ದುರಾದೃಷ್ಟಕರ ಸಂಗತಿ. 
 
ಇನ್ನು ಮೂಲಗಳ ಪ್ರಕಾರ, ಈ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದು ಹೇಗೆ ಎಂದು ತಿಳಿಯಲು ಇಲ್ಲಿನ ಪಾಲಿಕೆ ಸದಸ್ಯರು ಮೂರು ಬಾರಿ ಮುಂಬೈಗೆ ಭೇಟಿ ನೀಡಿ ಪರಿಶೀಲಿಸಿದ್ದರು ಎನ್ನಲಾಗಿದ್ದು, ಅದಕ್ಕಾಗಿ ಸುಮಾರು 5 ಲಕ್ಷ ಖರ್ಚಾ ಮಾಡಿಡಿದ್ದರೆ, ಪ್ರತಿಮೆಯನ್ನು ತರಲು ಸಾರಿಗೆ ಖರ್ಚಿಗಾಗಿ 7 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗೆ ಪ್ರತಿಮೆಯ ಅನಾವರಣ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯರು ಸುಮಾರು 30 ಲಕ್ಷ ರೂ. ವ್ಯಯಿಸಿದ್ದಾರೆ. ಆದರೆ ಪ್ರತಿಮೆಯನ್ನು ಮಾತ್ರ ಇಲ್ಲಿಯವರೆಗೂ ಅನಾವರಣ ಮಾಡಿಲ್ಲ. 
 
ಪಾಲಿಕೆಯ ಈ ಕುರುಡು ನೀತಿಯನ್ನು ಕಂಡು ಮಾಧ್ಯಮಗಳು ಪ್ರಶ್ನಿಸಲು ಯತ್ನಿಸುತ್ತಿವೆಯಾದರೂ ಪಾಲಿಕೆಯ ಯಾವೊಬ್ಬ ಸದಸ್ಯರೂ ಕೂಡ ಸೂಕ್ತ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಇದ್ದು, ಅಂದಾದರೂ ಪ್ರತಿಮೆ ಅನಾವರಣಗೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ. 
 

ವೆಬ್ದುನಿಯಾವನ್ನು ಓದಿ