ನಿರ್ಭಯಾ ತೀರ್ಪಿಗೆ ಸಚಿವ ಉಮಾಶ್ರೀ ಸ್ವಾಗತ

ಶುಕ್ರವಾರ, 5 ಮೇ 2017 (16:48 IST)
ನಿರ್ಭಯಾ ಅತ್ಯಾಚಾರಿಗಳಿಗೆ ಸುಪ್ರೀಂಕೋರ್ಚ್ ಮರಣದಂಡನೆ ವಿಧಿಸಿರುವುದು ಸ್ವಾಗತಾರ್ಹ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
 
ಯುವತಿಯ ಮೇಲೆ ಅಮಾನವೀಯವಾಗಿ, ಬರ್ಬರವಾಗಿ ಹೀನ ಕೃತ್ಯ ಎಸಗಿದ ಇಂತಹ ಮೃಗಗಳಿಗೆ ಗಲ್ಲು ಶಿಕ್ಷೆ ಸೂಕ್ತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಿರ್ಭಯಾ ಅತ್ಯಾಚಾರಿಗಳಾದ ಮುಕೇಶ್ ಸಿಂಗ್, ವಿನಯ್ ಶರ್ಮಾ ಪವನ್ ಗುಪ್ತಾ ಮತ್ತು ಅಕ್ಷಯ್ ಠಾಕೂರ್‌ಗೆ ಮರಣದಂಡನೆ ಖಾಯಂಗೊಳಿಸಿದಂತಾಗಿದೆ. ಇದರಿಂದ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪು ಎತ್ತಿಹಿಡಿದಂತಾಗಿದೆ.
 
ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಕೋರ್ಟ್ ಹಾಲ್‌ನಲ್ಲಿ ಉಪಸ್ಥಿತರಿದ್ದವರು "ಸುಪ್ರೀಂ" ತೀರ್ಪನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.   
 
ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಭಯಾ ತಾಯಿ, ಕಾನೂನಿನಲ್ಲಿ ವಿಳಂಬವಿದೆ. ಆದರೆ, ಕತ್ತಲಿಲ್ಲ ಎಂದು ಸುಪ್ರೀಂ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ