ರಾಜ್ಯ ಸರ್ಕಾರ 5200 ರೂ. ಕೇಂದ್ರ ಸರ್ಕಾರ ಕೇವಲ 1800 ರೂ.ನೀಡುತ್ತಿದೆ – ಉಮಾಶ್ರೀ

ಮಂಗಳವಾರ, 21 ಮಾರ್ಚ್ 2017 (12:24 IST)
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 2 ಸಾವಿರ ಸಂಬಳ ಹೆಚ್ಚಳ ಮಾಡಿದೆ. ಇನ್ನುಳಿದ 3 ಸಾವಿರ ಸಂಬಳ ಹೆಚ್ಚಳಕ್ಕೆ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ. ಗೋವಾ ಮತ್ತು ಕೇರಳ ಸರ್ಕಾರದ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಲು ಕೋರಿದ್ದಾರೆ ಎಂದು ವಿಧಾನಸಭೆಗೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಇದೇವೇಳೆ, ಪ್ರತಿಭಟನಾ ನಿರತ ಮಹಿಳೆಯರ ನೋವು ನಮಗೂ ತಿಳಿದಿದೆ. ಅವರಿಗೆ ಬೇಕಾದ ಸೌಲಭ್ಯ ೊದಗಿಸುವಂತೆ ಅಧಿಕಾರಿಗಳಿಗೆ ಸುಚಿಸಿರುವಿದಾಗಿ ಉಮಾಶ್ರಿ ಹೇಳಿದ್ದಾರೆ. 4 ವರ್ಷಗಳಿಂದ ಸರ್ಕಾರ ಅವರಿಗೆ ಆಸರೆಯಾಗಿ ನಿಂತಿದೆ. ನಿನ್ನೆ ನಾನು ಭೇಟಿಯಾದ ಸಂದರ್ಭವೂ ಈ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ ಎಂದು ಉಮಾಶ್ರೀ ತಿಳಿಸಿದರು.

ಯುಪಿಎ ಸರ್ಕಾರವಿದ್ದಾಗ ಶೇ.90ರಷ್ಟು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ವೇತನ ನೀಡುತ್ತಿತ್ತು. ಇದಿಗ, ಕೇಂದ್ರದ ಪಾಲನ್ನ 2017ರಲ್ಲಿ ಶೇ.40ರಷ್ಟು ಮತ್ತು ಶೇ.40ರಷ್ಟನ್ನ ರಾಜ್ಯಸರ್ಕಾರಕ್ಕೆ ಹಾಕಲಾಗಿದೆ. ಆದರೂ ರಾಜ್ಯ ಸರ್ಕಾರ 5200 ರೂ. ನೀಡುತ್ತಿದ್ದು, ಕೇಂದ್ರ ಸರ್ಕಾರ ಕೇವಲ 1800 ರೂ. ನೀಡುತ್ತಿದೆ. ಪ್ರತೀ ವರ್ಷ 500 ರೂ. ಹೆಚ್ಚಿಸುತ್ತಿದ್ದೇವೆ ಎಂದು ಉಮಾಶ್ರೀ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ