ಫೆಬ್ರವರಿ 9 ರಂದು ಕೆಲಸಕ್ಕೆ ಹೋಗಿದ್ದ ಬಾಲಕಿ ಸಂಜೆ ಮನೆಗೆ ಹಿಂತಿರುಗಿರಲಿಲ್ಲ.ಆಕೆಗಾಗಿ ಶೋಧ ನಡೆಸಿದ ಪೋಲಿಸರು ಕೊನೆಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯ ನಾಪತ್ತೆ ಹಿಂದೆ ಸ್ಥಳೀಯ ಹುಡುಗರ ಕೈವಾಡವಿರುವುದಾಗಿ ಆಕೆಯ ಪೋಷಕರು ಶಂಕೆ ವ್ಯಕ್ತ ಪಡಿಸಿದ್ದು ಕಾರ್ಯಾಚರಣಗಿಳಿದ ಪೊಲೀಸರು ಕೆಲ ಸಂಶಯಾಸ್ಪದ ಯುವಕರ ಮೊಬೈಲ್ ಸಂಖ್ಯೆ ಪಡೆದು ತನಿಖೆ ಪ್ರಾರಂಭಿಸಿದ್ದರು.