ಯುವತಿಯೊಂದಿಗೆ ಅಸಭ್ಯ ವರ್ತನೆ: ನೇಪಾಳ ವ್ಯಕ್ತಿ ಬಂಧನ

ಬುಧವಾರ, 24 ಜೂನ್ 2015 (12:19 IST)
ಯುವತಿಯೊಂದಿಗೆ ದುರ್ವರ್ತನೆ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಯುವಕನೋರ್ವನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. 
 
ಬಂಧಿತ ಆರೋಪಿಯನ್ನು ಸಾಮ್ರಾಟ್ ಜೋಷಿ ಎಂದು ಹೇಳಲಾಗಿದ್ದು, ನೇಪಾಳ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಬಂಧಿತ ವ್ಯಕ್ತಿ ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ನಗರದ ಎಂ.ಎಸ್.ರಾಮಯ್ಯ ಕಾಲೇಜಿನ ಬಳಿ ಯುವತಿಯೋರ್ವಳೊಂದಿಗೆ ದುರ್ವರ್ತನೆಯಿಂದ ವರ್ತಿಸಿದ್ದ ಎನ್ನಲಾಗಿದೆ. 
 
ಈ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಯುವತಿ ಕಿರುಚಿಕೊಂಡು ಸ್ಥಳೀಯರ ಸಹಾಯ ಪಡೆದು ಆರೋಪಿಯಿಂದ ಪಾರಾಗಿದ್ದಳು. ಆ ಬಳಿಕ ಮತ್ತಿಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ವೆಬ್ದುನಿಯಾವನ್ನು ಓದಿ