ಡಾಲ್ಡಾ ಜಾಲ ಭೇದಿಸಲು ತೆರಳಿದ ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

ಭಾನುವಾರ, 21 ಸೆಪ್ಟಂಬರ್ 2014 (18:13 IST)
ಹಸು ಎಲುಬಿನಿಂದ ಅಕ್ರಮವಾಗಿ ಡಾಲ್ಡಾ ತಯಾರಿಕೆ ಮಾಡುತ್ತಿದ್ದ ಜಾಲವನ್ನು ಕುರಿತು ವರದಿ ಮಾಡಲು ತೆರಳಿದ್ದ ನಾಲ್ವರು ಮಾಧ್ಯಮಪ್ರತಿನಿಧಿಗಳ ಮೇಲೆ ಡಾಲ್ಡಾ ತಯಾರಿಕೆ ಅಡ್ಡೆಯ 70ಕ್ಕೂ ಹೆಚ್ಚು ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿದ ವಿದ್ಯಮಾನ ಹುಮ್ನಾಬಾದ್ ಚಿಟಗುಪ್ಪಾದಲ್ಲಿ ಸಂಭವಿಸಿದೆ. ಚಿಟಗುಪ್ಪಾ ಗ್ರಾಮದ ಮೂರು ಅಡ್ಡೆಗಳಲ್ಲಿ  ಈ ದುಷ್ಕರ್ಮಿಗಳು ಅಕ್ರಮವಾಗಿ ಡಾಲ್ಡಾ ತಯಾರಿ ಮಾಡುತ್ತಿದ್ದರು.

ಈ ಜಾಲದ ಬೆನ್ನುಹತ್ತಿದ ಪತ್ರಕರ್ತರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ನಾಲ್ವರು ಪತ್ರಕರ್ತರನ್ನು ಆಸ್ಪತ್ರೆ
ಗೆ ಸೇರಿಸಲಾಗಿದೆ. ಪತ್ರಕರ್ತರ ಲ್ಯಾಪ್‌ಟಾಪ್, ಕ್ಯಾಮೆರಾಗಳನ್ನು ಕಸಿದುಕೊಂಡ ದುಷ್ಕರ್ಮಿಗಳು ಅವನ್ನು ಸುಟ್ಟುಹಾಕಿದ್ದಾರೆ.  ಏತನ್ಮಧ್ಯೆ ದುಷ್ಕರ್ಮಿಗಳಿಂದ ಪತ್ರಕರ್ತರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿವೆ.

ಚಿಟಗುಪ್ಪಾದ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಪ್ರತಿನಿಧಿಗಳ ಆರೋಗ್ಯ ವಿಚಾರಿಸಿದ ಭಾಲ್ಕಿ ಶಾಸಕ ವೀರಣ್ಣ ಖಂಡ್ರೆ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದರು. ಈ ಬಗ್ಗೆ ಗೃಹಸಚಿವರಿಗೆ ಮಾಹಿತಿ ನೀಡಲಾಗುವುದು. ಇದು ಪ್ರಜಾಪ್ರಭಪತ್ವಕ್ಕೆ ಧಕ್ಕೆಯಾಗುವಂತ ವಿಚಾರವಾಗಿದೆ ಎಂದು ಅವರು ಹೇಳಿದರು.  ಈ ಘಟನೆಗೆ ಸಂಬಂಧಿಸಿದಂತೆ ಮುಜೀವ್, ಅಯೂಬ್, ಜಾವೇದ್ ಸೇರಿ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ