ತಾರಾ, ಜಯಮಾಲಾ ಆಯ್ತು, ಇದೀಗ ವಿನಿಷ್ ನೀರೋ ಹೆಗಲ ಮೇಲೆ ಕೈ ಹಾಕಿದ ಅಶೋಕ ಖೇಣಿ

ಮಂಗಳವಾರ, 1 ಮಾರ್ಚ್ 2016 (16:29 IST)
ತಾರಾ, ಜಯಮಾಲಾ ಬಳಿಕ ಈಗ ಅಶೋಕ ಖೇಣಿ ಆಂಗ್ಲೋ ಇಂಡಿಯನ್ ಶಾಸಕಿ ವಿನಿಷಾ ನೀರೋ ಹೆಗಲ ಮೇಲೆ ಕೈ ಹಾಕಿದ್ದಾರೆ. ವಿಧಾನಸಭೆಯಲ್ಲಿ  ಶಾಸಕ ಅಶೋಕ್ ಖೇಣಿ  ಎಂಎಲ್ಎ ವಿನಿಷಾ ನೀರೋ ಮೇಲೆ ಕೈ ಹಾಕಿದ್ದಾರೆ. ಈ ಮೂಲಕ ಅಶೋಕ ಖೇಣೆ ತಮ್ಮ ಚಾಳಿ ಮುಂದುವರೆಸಿದ್ದಾರೆ. 
ಇಂದು ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಿದ್ದ ಅಶೋಕ ಖೇಣಿ, ಅಲ್ಲೇ ಇದ್ದ ಶಾಸಕಿ ವಿನಿಷಾ ನೀರೋರನ್ನು ಮಾತನಾಢಿಸಲು ಬಂದಿದ್ದಾರೆ. ಈ ವೇಳೆ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿರುವುದು ತಿಳಿದು ಬಂದಿದೆ. 
 
ವಿಧಾನಸಭೆಯಲ್ಲಿ ನಿನ್ನೆ ನಡೆದ ಕಲಾಪದಲ್ಲಿ ಶಾಸಕ ಅಶೋಕ್ ಖೇಣಿ, ಕಾಂಗ್ರೆಸ್ ಶಾಸಕಿ ಜಯಮಾಲಾ ಮತ್ತು ಬಿಜೆಪಿ ಶಾಸಕಿ ತಾರಾ ಅವರ ಹೆಗಲ ಮೇಲೆ ಕೈಹಾಕಿ ಅವಾಂತರ ಸೃಷ್ಟಿಸಿದ್ದರು.  
 
ಖೇಣಿಯವರ ವರ್ತನೆಯಿಂದ ಇರಿಸುಮುರಿಸುಗೊಂಡಿದ್ದ ಕಾಂಗ್ರೆಸ್ ಶಾಸಕಿ, ಜಯಮಾಲಾ ಖೇಣಿ ಕೈಯನ್ನು ನಯವಾಗಿ ತಳ್ಳಿಹಾಕಿದ್ದಾರೆ. ಬಿಜೆಪಿ ಶಾಸಕಿ ತಾರಾ ಅನುರಾಧ ಕೂಡಾ ಅವರ ಕೈಯನ್ನು ತೆಗೆದು ಅಲ್ಲಿಂದ ಜಾರಿಕೊಂಡಿದ್ದಾರೆ.

ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ಮಹಿಳಾ ಶಾಸಕಿಯರು ಪರಸ್ಪರ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಶಾಸಕ ಖೇಣಿ, ಜಯಮಾಲಾ ಮತ್ತು ತಾರಾ ಅವರ ಹೆಗಲ ಮೇಲೆ ಕೈ ಹಾಕಿ ಮಾತು ಆರಂಭಿಸಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ