ಅಧಿಕಾರಿಗೆ ಶಾಸಕರ ಧಮ್ಕಿ ಪ್ರಕರಣ: ವಿಚಾರಣೆ ಮುಕ್ತಾಯ

ಗುರುವಾರ, 9 ಏಪ್ರಿಲ್ 2015 (16:49 IST)
ಅಧಿಕಾರಿಗೆ ಧಮ್ಕಿ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರ ವಿರುದ್ಧ ನಗರದ ಸೆಷನ್ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯು ಇಂದು ಅಂತ್ಯಗೊಂಡಿದ್ದು, ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 
 
ಪ್ರಕರಣದ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣದ ವಾದಿಗಳು ಹಾಗೂ ಪ್ರತಿವಾದಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಅಲ್ಲದೆ ಪ್ರಕರಣದ ಎಲ್ಲಾ ಹಂತದ ವಿಚಾರಣೆಯು ಇಂದಿಗೆ ಪೂರ್ಣಗೊಂಡಿದ್ದು, ಕೋರ್ಟ್ ತೀರ್ಪನ್ನು ಕಾಯ್ದಿರಿಸಿ ಪ್ರಕರಣವನ್ನು ಏಪ್ರಿಲ್ 16ರಕ್ಕೆ ಮುಂದೂಡಿತು.  
 
ಮಾನವ ಹಕ್ಕುಗಳ ಹೋರಾಟಗಾರ ಗಿರೀಶ್ ಗೌಡ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಕಳೆದ ಮಾರ್ಚ್ 31ರಂದು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. 
 
ಶಾಸಕ ವರ್ತೂರು ಪ್ರಕಾಶ್ ಅವರು ಪ್ರೊಬೇಷನರ್ ಅಧಿಕಾರಿಯೋರ್ವರಿಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆಡಿಯೋ ಕ್ಲಿಪ್‌ವೊಂದನ್ನು ಬಿಡುಗಡೆಗೊಳಿಸಿದ್ದರು. ಈ ಆಡಿಯೋ ಕ್ಲಿಪ್ ಆಧಾರಸಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.   
 
   

ವೆಬ್ದುನಿಯಾವನ್ನು ಓದಿ