ವಿದೇಶದಿಂದಲೂ ಕಪ್ಪು ಹಣ ವಾಪಸ್ ತರುವ ಸಾಹಸಿ ಪ್ರಧಾನಿ ಮೋದಿ: ಸೂಲಿಬೆಲೆ

ಶುಕ್ರವಾರ, 23 ಡಿಸೆಂಬರ್ 2016 (11:02 IST)
ಪ್ರಧಾನಿ ಮೋದಿ ಕೇವಲ ದೇಶದಲ್ಲಿರುವ ಕಪ್ಪು ಹಣ ಮಾತ್ರವಲ್ಲದೆ, ವಿದೇಶದಲ್ಲಿರುವ ಕಪ್ಪು ಹಣವನ್ನು ಹೊರ ತರುತ್ತಾರೆ. ಈ ಮೂಲಕ ಭಾರತವನ್ನು ಭ್ರಷ್ಟಮುಕ್ತ ದೇಶವನ್ನಾಗಿ ಮಾಡುತ್ತಾರೆ. ಆದರೆ, ಇಂತಹ ಮಹಾನುಭಾವರನ್ನು ಅಮ್ಮ-ಮಗ ಟೀಕಿಸುತ್ತಿರುವುದು ಎಷ್ಟು ಸರಿ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. 
ಯಾರನ್ನು 'ಛಾಯ್ ವಾಲಾ" ಎಂದು ಕರೆಯುತ್ತಿದ್ರೊ, ಆ ಮಹಾನಭಾವ ದೇಶಕ್ಕಾಗಿ ಮಾಡಿರೋ ಮಹತ್ತರ ಕೆಲಸಕ್ಕೆ ಅಮ್ಮ-ಮಗ ಟೀಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
 
ಗದಗ ಜಿಲ್ಲೆಯ ನಗರಸಭೆ ಕಾಲೇಜಿನ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಹಾಗೂ ಕ್ಯಾಶ್‌ಲೆಸ್ ದುನಿಯಾ ಕುರಿತು ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 500 ಹಾಗೂ 1000 ಮುಖಬೆಲೆಯ ನೋಟು ನಿಷೇದ ಮಾಡಿರುವುದು ಶ್ರೇಷ್ಠ ಹಾಗೂ ಆರ್ಥಿಕ ಗೌಪ್ಯ ಎಂದು ಅಭಿಪ್ರಾಯಪಟ್ಟರು. 
 
ಪ್ರಧಾನಿ ಮೋದಿ ಅವರು 500, 1000 ಮುಖಬೆಲೆಯ ನೋಟು ನಿಷೇಧ ಮಾಡಿರುವುದು ಕೇವಲ ರೇಷ್ಮೆದಾರದ ಅಳತೆ ಮಾತ್ರ. ಆದರೆ, ನೋಟು ನಿಷೇಧ ನಿರ್ಧಾರ ಮುಂಬರುವ ದಿನಗಳಲ್ಲಿ ಹಗ್ಗದ ಗಾತ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ