ಬೋದ್‌ಗಯಾದಲ್ಲಿ ಅಂತಾರಾಷ್ಟ್ರೀಯ ಹಿಂದೂ-ಬೌದ್ಧ ಸಂವಾದ ಕಾರ್ಯಕ್ರಮ: ಬೋಧಿ ವೃಕ್ಷದ ಕೆಳೆಗೆ ಮೋದಿ ಧ್ಯಾನ

ಶನಿವಾರ, 5 ಸೆಪ್ಟಂಬರ್ 2015 (13:05 IST)
ಬಿಹಾರ ರಾಜ್ಯದ ಬೋದ್‌ಗಯಾದಲ್ಲಿ ಅಂತಾರಾಷ್ಟ್ರೀಯ ಜಾಗತಿಕ ಹಿಂದೂ-ಬೌದ್ಧ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಭಾಗಿಯಾಗಿ ಇಲ್ಲಿನ ಬೋಧಿ ವೃಕ್ಷದ ಕೆಳಗೆ ವಜ್ರಾಸನದಲ್ಲಿ ಕುಳಿತು ಧ್ಯಾನ ಮಾಡುವ ಮೂಲಕ ಗಮನ ಸೆಳೆದರು. 
 
ಹೌದು, ಬೋದ್‌ಗಯಾ ಎಂಬ ಬುದ್ದನ ಈ ಪುಣ್ಯ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಅವರು ಮೂರನೇ ಪ್ರಧಾನಿಯಾಗಿದ್ದು, ಇಂದು ಇಲ್ಲಿನ ಬೋಧಿ ವೃಕ್ಷದ ಕೆಳಗೆ ವಜ್ರಾಸನದಲ್ಲಿ ಕುಳಿತು ಧ್ಯಾನ ಮಾಡಿದರು. ಈ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ 70 ದೇಶಗಳ 220 ಮಂದಿ ಪ್ರತಿನಿಧಿಗಳು ಆಗಮಿಸಿದ್ದು, ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
 
ಇನ್ನು ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಶಿಕ್ಷಕರ ದಿನಾಚರಣೆ ಮತ್ತು ಶ್ರೀಕೃಷ್ಣ ಜನ್ಮಾಷ್ಠಮಿ ದಿನವಾದ ಇಂದು ನಾನು ಇಲ್ಲಿಗೆ ಆಗಮಿಸಿದ್ದೇನೆ. ಇದು ನನಗೆ ತುಂಬಾ ಖುಷಿ ತಂದಿದ್ದು, ನೆಹರು ಹಾಗೂ ವಾಜಪೇಯಿ ಬಳಿಕ ಇಲ್ಲಿಗೆ ಬಂದಿದ್ದೇನೆ. ಬೋದ್‌ಗಯಾ ಎಂಬ ಹೆಸರಿನ ಬುದ್ಧನ ಈ ಭೂಮಿ ಮಾನವೀಯತೆಗಾಗಿ ಮಾಡುವ ಸೇವೆಯ ಪುಣ್ಯ ಭೂಮಿಯಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ