ಮಹದಾಯಿ ಕುರಿತು ಪ್ರಧಾನಿ ಭರವಸೆ ಕೊಡಲಿಲ್ಲ: ಸಿದ್ದರಾಮಯ್ಯ

ಸೋಮವಾರ, 2 ಜನವರಿ 2017 (09:17 IST)
ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನ್ಯಾಯಾಧೀಕರಣದ ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಜೊತೆಗೆ ಪ್ರಧಾನಿಯವರ ಮಧ್ಯಸ್ಥಿಕೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯವೂ ಆಗಿದೆ. ಈ ಕುರಿತು ಪ್ರಧಾನಿಯವರ ಗಮನ ಸೆಳೆಯಾಯಿತು. ಅವರು ನಮ್ಮ ಮಾತುಗಳನ್ನು ಆಲಿಸಿದರೇ ಹೊರತು ಯಾವುದೇ ಭರವಸೆ ಕೊಡಲಿಲ್ಲ. 
 
ಮಹಾದಾಯಿ ಕುರಿತು ಪ್ರಧಾನಿಯವರೊಂದಿಗೆ ಮಾತನಾಡುವಾಗ ನಿಯೋಗದೊಂದಿಗೆ ಬಂದಿದ್ದ ರಾಜ್ಯ ಬಿಜೆಪಿ ನಾಯಕರು ಮೌನವಾಗಿದ್ದರು. ಆದರೆ ಕೇಂದ್ರ ಸಚಿವ ಅನಂತಕುಮಾರ್ ಅವರು ಮಾತ್ರ ನಾವು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇವೆ ಎಂದರು. 
 
ತೆಲುಗುಗಂಗಾ ಯೋಜನೆಯಲ್ಲಿ ಈ ಹಿಂದೆ ನಾವು 15 ಟಿಎಂಸಿ ಕೊಟ್ಟಿದ್ದೇವೆ. ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಆಗ ಬಿಕ್ಕಟ್ಟು ಇತ್ಯರ್ಥ ಮಾಡಿದ್ದರು. ಈ ವಿಚಾರವನ್ನು ಪ್ರಧಾನಿಯವರ ಗಮನಕ್ಕೆ ತರಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಮುಖ್ಯಮಂತ್ರಿಯವರು ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ