ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ ಭಾಷಣ ಕೆಳಗಿದೆ ಓದಿ

ಬುಧವಾರ, 24 ಸೆಪ್ಟಂಬರ್ 2014 (11:20 IST)
ಭಾ ರತದ ಮಂಗಳಯಾನ ಯೋಜನೆ ಯಶಸ್ವಿಯಾಗಿ ಮಂಗಳನ ಕಕ್ಷೆ ತಲುಪಿದ ಬಳಿಕ ಬೆಂಗಳೂರಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿಯಂತ್ರಣ ಕೇಂದ್ರದಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು. ಅವರ ಭಾಷಣದ ಮುಖ್ಯಾಂಶಗಳು ಕೆಳಗಿವೆ ಓದಿ
 
 ಭಾರತ ಯಶಸ್ವಿಯಾಗಿ ಮಂಗಳನ ಕಕ್ಷೆಯನ್ನು ತಲುಪಿದೆ ನಿಮಗೆಲ್ಲ ಅಭಿನಂದನೆಗಳು. ನಾವು ಅಸಾಧ್ಯವಾದುದನ್ನು ಸಾಧಿಸಿದ್ದೇವೆ. ಇಸ್ರೋ ಗಣ್ಯ ಸಂಸ್ಥೆಗಳ ಸಾಲಿಗೆ ಸೇರಿದೆ. ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಮೊದಲ ರಾಷ್ಟ್ರ ಭಾರತ. ಮಾನವ ಕಲ್ಪನೆಯ ಗಡಿಗಳನ್ನು ನಾವು ದಾಟಿ ಹೋಗಿದ್ದವೆ. ಇತಿಹಾಸ ನಿರ್ಮಾಣವಾಗಿದೆ. ಇಂತಹ ಐತಿಹಾಸಿಕ ಸಂದರ್ಭದಲ್ಲಿ ನಾನು ವಿಜ್ಞಾನಿಗಳನ್ನು, ಸಹ ಭಾರತೀಯರನ್ನು ಅಭಿನಂದಿಸುತ್ತೇವೆ. 
 
ಮಾಮ್ ಮಂಗಳ ಜೊತೆ ಮಿಲನವಾಗಿದೆ. ಮಾಮ್ ನಮಗೆ ನಿರಾಶೆ ಉಂಟುಮಾಡುವುದೇ ಇಲ್ಲ. ರಾಷ್ಟ್ರನಿರ್ಮಾಣದ ಅಂತಿಮ ಗುರಿಯ ಮೇಲೆ ನಮ್ಮ ಪ್ರಯತ್ನಗಳು ಐಸಿಹಾಸಿಕವಾಗಿ ಕೇಂದ್ರೀಕೃತವಾಗಿದೆ.
 
 ನಿಮ್ಮ ಸಾಧನೆಗಳ ಮೂಲಕ ನಮ್ಮ ಹಿರಿಯರಿಗೆ ಗೌರವಿಸಿದ್ದೀರಿ, ಭವಿಷ್ಯದ ಜನಾಂಗಗಳಿಗೆ ಸ್ಫೂರ್ತಿಯಾಗಿದ್ದೀರಿ, ನಿಮ್ಮ ಮೇಧಾವಿತನದಿಂದ, ಕಠಿಣ ಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಿದ್ದೀರಿ.ವಿಸ್ಮಯಕಾರಿಯಾದ 650 ದಶಲಕ್ಷ ಅಥವಾ 65 ಕೋಟಿ ಕಿಮೀ ದೂರವನ್ನು ಕ್ರಮಿಸುವ ಮೂಲಕ ನಾವು ಮಾನವ ಕಲ್ಪನೆಯ ಗಡಿಗಳಾಚೆ ಮುಟ್ಟಿದ್ದೇವೆ.ವೆಲ್ಲಾ ಸಾಧನೆಗಳು ಇತಿಹಾಸದ ಮೈಲಿಗಲ್ಲುಗಳಾಗಿ ದಾಖಲೆಯಾಗುತ್ತವೆ.

ದೊಡ್ಡ ಸಾಧನೆಯನ್ನು ಮಾಡುವ ನಿರ್ಧಾರ ಕೈಗೊಳ್ಳುವ ಧೈರ್ಯವೇ ಯಶಸ್ಸಿಗೆ ಮೆಟ್ಟಿಲಾಗಿದೆ. ಅಟಲ್‌ಜಿ ಅವರ ದೂರದೃಷ್ಟಿ ನಾವು ಚಂದ್ರನಲ್ಲಿಗೆ ತಲುಪಲು ಸ್ಫೂರ್ತಿನೀಡಿದೆ. ಮುಂದಿನ ಗಡಿಯನ್ನು ಮುಟ್ಟಲು ಇದು ನೆಲೆಯಾಗಬೇಕು. ಇಂದಿನ ಯಶಸ್ಸು ಹೆಚ್ಚಿನ ಚೈತನ್ಯವನ್ನು ನಮಗೆ ನೀಡುತ್ತದೆ.

ವೆಬ್ದುನಿಯಾವನ್ನು ಓದಿ