ಶಿಕ್ಷಕರ ದಿನಾಚರಣೆ ಹಿನ್ನೆಲೆ ಪ್ರಧಾನಿ ಮೋದಿ ಭಾಷಣ: ನೇರ ಪ್ರಸಾರ

ಶುಕ್ರವಾರ, 4 ಸೆಪ್ಟಂಬರ್ 2015 (10:20 IST)
ನಾಳೆ ಶಿಕ್ಷಕರ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ಮಾಣಿಕ್ ಶಾ ಹಾಲ್‌ನಲ್ಲಿ ಭಾಷಣ ಮಾಡಲಿದ್ದು, ಎರಡು ಗಂಟೆಗಳ ಕಾಲ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. 
 
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮವು ಬೆಳಗ್ಗೆ 9.45ಕ್ಕೆ ಆರಂಭವಾಗಲಿದೆ. ವೇದಿಕೆಯಲ್ಲಿ ಪ್ರಧಾನಿ ಹಾಗೂ ಸಚಿವೆ ಸ್ಮೃತಿ ಇರಾನಿ ವೇದಿಕೆ ಮೇಲಿರಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ಪ್ರಧಾನಿಯವರ ಭಾಷಣವನ್ನು ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವೆಬ್‌ಸೈಟ್ ಹಾಗೂ ಸರ್ಕಾರಿ ರೇಡಿಯೋ ವಾಹಿನಿಯಲ್ಲಿ ಪ್ರಸಾರ ಮಾಡಲು ನಿರ್ಧರಿಸಲಾಗಿದ್ದು, ನೇರ ಪ್ರಸಾರವಾಗಲಿದೆ. 
 
ಇನ್ನು ಪ್ರಧಾನಿಗಳ ಭಾಷಣ ರಾಷ್ಟ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು ಎಂಬ ಕಾರಣದಿಂದ ರಾಷ್ಟ್ರದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಸೂಚನೆ ಬಂದಿದ್ದು, ಟಿವಿ, ಜನರೇಟರ್, ಪ್ರೊಜೆಕ್ಟರ್, ಹಾಗೂ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವಂತೆ ಖಡಕ್ ಸೂಚನೆ ಹೊರಡಿಸಲಾಗಿದೆ. 
 
ಮಾಜಿ ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಪ್ರತಿ ವರ್ಷ ಸೆ.5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. 

ವೆಬ್ದುನಿಯಾವನ್ನು ಓದಿ