ಬಟ್ಟೆ ತೊಳೆಯುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಟ್ಟೆ ಬಿಚ್ಚಿ ಸಾರ್ವಜನಿಕ ಮೆರವಣಿಗೆ

ಭಾನುವಾರ, 23 ನವೆಂಬರ್ 2014 (16:12 IST)
ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನೊಬ್ಬ ಈಗ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ. ಬೆಂಗಳೂರಿನ ವೈಟ್‌ಫೀಲ್ಡನ ಬೆಳ್ತೂರಿನಲ್ಲಿ ಈ ಘಟನೆ ನಡೆದಿದೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ 10 ವರ್ಷದ ಬಾಲಕಿ ಮನೆ ಮುಂದೆ ತಾಯಿಯೊಂದಿಗೆ ಬಟ್ಟೆ ತೊಳೆಯುತ್ತಿದ್ದಳು. ಏನೋ ಕೆಲಸವಿದೆಯೆಂದು ತಾಯಿ ಮನೆ ಒಳಗೆ ಹೋದಾಗ ಅಲ್ಲಿಗೆ ಬಂದ ಅಶೋಕ್ ಎಂಬಾತ  ತನ್ನ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸಿ ಬಾಲಕಿಗೆ ಲೈಂಗಿಕ ಪ್ರಚೋದನೆ ನೀಡಲು ಪ್ರಯತ್ನಿಸಿದ್ದಾನೆ. ವಿಕೃತ ಕಾಮುಕನ ಅಸಭ್ಯ ವರ್ತನೆಗೆ ಬೆದರಿದ ಬಾಲಕಿ ಕಿರುಚುತ್ತ ಮನೆ ಒಳಗೆ ಓಡಿದ್ದಾಳೆ. ಆಗ ಹೊರಗೆ ಬಂದ ಆಕೆಯ ಪಾಲಕರು ಯುವಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. 
 
ಸ್ಥಳದಲ್ಲಿ ಸೇರಿದ ನೆರೆಹೊರೆಯವರು ಕೂಡ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಮತ್ತು ಆತನ ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
 
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಂಧ್ರಪ್ರದೇಶದ ಮೂಲದವನೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ