ಹೈಕೋರ್ಟ್‌ಗೆ ಸೋಮವಾರ ರಜೆ: ಜಯಾ ವಿಚಾರಣೆ ಮಂಗಳವಾರ

ಬುಧವಾರ, 1 ಅಕ್ಟೋಬರ್ 2014 (20:03 IST)
ಜಯಲಲಿತಾ ಅಕ್ರಮ ಆಸ್ತಿಗೆ ಸಂಬಂಧಿಸಿ ಕೋರ್ಟ್ ಶಿಕ್ಷೆ ವಿಧಿಸಿದ್ದರ ವಿರುದ್ಧ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ವಿಚಾರಣೆಯನ್ನು 7ನೇ ತಾರೀಖು ಮಂಗಳವಾರಕ್ಕೆ ಮುಂದೂಡಿದೆ.   ಇಂದು ರಜಾಕಾಲದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡು ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

ಸೆಂಟ್ರಲ್ ಮೂನ್ ಕಮಿಟಿ ಸೂಚನೆ ಮೇರೆಗೆ ಭಾನುವಾರದ ಬದಲು ಬಕ್ರೀದ್ ಸೋಮವಾರ ಆಚರಣೆ ಮಾಡುವುದರಿಂದ ಹೈಕೋರ್ಟ್‌ಗೆ ಸೋಮವಾರ ರಜೆ ಘೋಷಿಸಲಾಗಿದೆ. ಇದರಿಂದ ಜಯಲಲಿತಾ ಮೇಲ್ಮನವಿ ಅರ್ಜಿ  ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಾಗುತ್ತದೆ. ಜಯಲಲಿತಾ ಅವರ ವಿಚಾರಣೆಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಪೀಠ ಸೋಮವಾರ 6ನೇ ತಾರೀಖಿಗೆ ಮುಂದೂಡಿತ್ತು. ಆದರೆ ತಮಿಳುನಾಡಿನ ವಕೀಲರು ವಿಚಾರಣೆ ಇಂದೇ ನಡೆಯಬೇಕೆಂದು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಮೂರ್ತಿ ವಘೇಲಾ ಇಂದೇ ವಿಚಾರಣೆಗೆ ಸೂಚನೆ ನೀಡಿದ್ದರು.

 ಜಯಲಲಿತಾ ಸಲ್ಲಿಸಿರುವ ಅರ್ಜಿಯ ಸಂಪೂರ್ಣ ವಿಚಾರಣೆ ಅಗತ್ಯವಿದ್ದು, ಇದಕ್ಕೆ ರಜಾಕಾಲದ ಪೀಠ ಸೂಕ್ತವಲ್ಲ. ಅರ್ಜಿಯ ಎಲ್ಲಾ ಅಂಶಗಳನ್ನು ಪರಿಶೀಲಿಸದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾ. ರತ್ನಕಲಾ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದರು. 

ವೆಬ್ದುನಿಯಾವನ್ನು ಓದಿ