ಕಾಂಗ್ರೆಸ್ ಬೆಂಬಲಿಗರಿಂದ ಮತದಾರರಿಗೆ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ಆರೋಪ

ಶನಿವಾರ, 13 ಫೆಬ್ರವರಿ 2016 (11:41 IST)
ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಹಣ ಹಂಚುತ್ತಿದ್ದಾರೆ. ಇದನ್ನು ತಡೆಗಟ್ಟದಿದ್ದರೆ ನಾನು ಕೂಡ ಬೀದಿಗಿಳಿದು ಗಲಭೆಗೂ ಸಿದ್ಧವಿರುವುದಾಗಿ ಬಿಜೆಪಿ ಅಭ್ಯರ್ಥಿ  ವೈ.ಎ. ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭೈರತಿ ಭಸವರಾಜ್ ಬೆಂಬಲಿಗ ಕಾಂಗ್ರೆಸ್ ನಾಯಕರು ಯಥೇಚ್ಛವಾಗಿ ಹಣ ಹಂಚಿಕೆ ಮಾಡಿದ್ದಾರೆ.

ಹೀಗೆ ಮುಂದುವರಿದರೆ ತಾವೇ ಮುಂದೆ ನಿಂತು ಬೆಂಬಲಿಗರೊಂದಿಗೆ ಧರಣಿ ಮಾಡುವುದಾಗಿ ಹೇಳಿಕೆ ನೀಡಿದರು. ಹಣ ಹಂಚುತ್ತಿದ್ದ ಕಾಂಗ್ರೆಸ್ ಬೆಂಬಲಿಗನೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. 

ಭೈರತಿ ಬಸವರಾಜ್ ಕಡೆಯವರು ಕಾರುಗಳಲ್ಲಿ ಬಂದು ಜನರಿಗೆ ನೇರವಾಗಿ ಹಣ ಹಂಚುತ್ತಿದ್ದಾರೆ. ಇಲ್ಲಿ ಸರ್ಕಾರ ಸಂಪೂರ್ಣವಾಗಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದೆ. ಹೀಗೆ ಮುಂದುವರಿದರೆ ನೀವು ಬೇರು ಸಮೇತ ಹೊರಟುಹೋಗುತ್ತೀರಿ ಎಂದು ಎಚ್ಚರಿಸಿದರು.

ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ರೆಡ್ಡಿ ವಿರುದ್ಧ ಆರೋಪ ಮಾಡಿದ್ದೀರಿ. ಈಗ ನೀವೇನು ಮಾಡುತ್ತಿದ್ದೀರಿ, ರಿಪಬ್ಲಿಕ್ ಆಫ್ ಬೆಂಗಳೂರು ಮಾಡುತ್ತಿದ್ದೀರಾ.  ಹಣ ಹಂಚುತ್ತಿದ್ದರೂ ಪೊಲೀಸರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ ಎಂದು ನಾರಾಯಣ ಸ್ವಾಮಿ ಆರೋಪಿಸಿದರು. ಹೀಗೆ ಮುಂದುವರಿದರೆ ಮುಂದಿನ ಅನಾಹುತಗಳಿಗೆ ರಾಜ್ಯಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. 

ವೆಬ್ದುನಿಯಾವನ್ನು ಓದಿ