ಶಿಕಾರಿಪುರದ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ

ಗುರುವಾರ, 21 ಆಗಸ್ಟ್ 2014 (10:57 IST)
ಶಿಕಾರಿಪುರ:  ಶಿಕಾರಿಪುರದ ಹಿತ್ತಲ ಗ್ರಾಮದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ದೃಶ್ಯ ಟಿವಿವಾಹಿನಿ ಕ್ಯಾಮೆರಾದಲ್ಲಿ ಸೆರೆಯಾದ ಪ್ರಕರಣ ನಡೆದಿದೆ.  ಶಿಕಾರಿಪುರ ವಿಧಾನಸಭೆ ಉಪಚುನಾವಣೆಯಲ್ಲೂ ಕೂಡ ಓಟಿಗಾಗಿ ನೋಟು ಹಂಚುವ ಕಾಯಕ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ವ್ಯಕ್ತಿ ಕಿಸೆಯಲ್ಲಿ ನೋಟಿನ ಕಂತೆ ಹಿಡಿದುಕೊಂಡು ದಾರಿಯಲ್ಲಿ ಓಟು ಮಾಡಲು ಹೋಗುವಂತ ಮತದಾರರಿಗೆ 200 ರೂ. ಹಂಚುತ್ತಿದ್ದ ದೃಶ್ಯ ಕಂಡುಬಂದಿದೆ.

ಶಿಕಾರಿಪುರದಲ್ಲಿ  ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.  ಹಣ ಹಂಚುತ್ತಿದ್ದ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವರು ಎಂದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. 
 

ವೆಬ್ದುನಿಯಾವನ್ನು ಓದಿ