ಧಾರವಾಡ: ಸೊಸೆಯನ್ನು ಮಣಿಸಿದ ಅತ್ತೆ

ಮಂಗಳವಾರ, 23 ಫೆಬ್ರವರಿ 2016 (17:21 IST)
ಧಾರವಾಡದ ರಾಯನಾಳ ತಾಲೂಕು ಪಂಚಾಯತ್‌ ಕ್ಷೇತ್ರದಲ್ಲಿ ಅತ್ತೆ ಮತ್ತು ಸೊಸೆ ನಡುವೆ ನೇರ ಹಣಾಹಣಿ ನಡೆದಿದ್ದು, ಅಂತಿಮವಾಗಿ ಅತ್ತೆಯೇ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ದೇವಕ್ಕ ಯಲ್ಲಪ್ಪ ಸಹವಾಸೆ ತಮ್ಮ ಸೊಸೆ ಸುಧಾ ಸಹವಾಸೆ ಯನ್ನು 628 ಮತಗಳಿಂದ ಸೋಲಿಸಿದ್ದಾರೆ. 

ಅತ್ತೆ ಕಾಂಗ್ರೆಸ್‌ನಿಂದ, ಸೊಸೆ ಬಿಜೆಪಿಯಿಂದ ಕಣಕ್ಕಿಳಿದಿದ್ದರು.
 
ಗೆಲುವಿಗಾಗಿ ಸಂತೋಷ ವ್ಯಕ್ತ ಪಡಿಸಿರುವ ಅತ್ತೆ , ಸೊಸೆ ತಮ್ಮನ್ನು ಸೋಲಿಸಿದ್ದರೂ ತಮಗೆ ಸಂತೋಷವೇ ಆಗುತ್ತಿತ್ತು ಎಂದು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ