ಸ್ಥಳೀಯ ಸಂಸ್ಥೆಗಳಲ್ಲಿ ಶಾಸಕ, ಸಂಸದರಿಗೆ ಮತ ಚಲಾಯಿಸುವ ಹಕ್ಕಿದೆ: ಹೈಕೋರ್ಟ್

ಗುರುವಾರ, 8 ಅಕ್ಟೋಬರ್ 2015 (17:25 IST)
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ನೇಮಕ ವೇಳೆ ಶಾಸಕರು ಮತ್ತು ಸಂಸದರಿಗೆ ಮತ ಚಲಾಯಿಸುವ ಹಕ್ಕಿಲ್ಲ ಎಂದು ಈ ಹಿಂದೆ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ತಡೆ ಹಿಡಿದಿರುವ ಕಲ್ಬುರ್ಗಿಯ ಹೈಕೋರ್ಟ್‌ನ ದ್ವಿ ಸದಸ್ಯರಿದ್ದ ನ್ಯಾಯಾಧೀಶರ ವಿಭಾಗೀಯ ಪೀಠ, ಇಂದು ಮತ ಚಲಾಯಿಸುವ ಹಕ್ಕಿದೆ ಎಂದು ಮರು ಆದೇಶ ನೀಡಿದೆ. 
 
ವಿಭಾಗೀಯ ಪೀಠದಲ್ಲಿದ್ದ ನ್ಯಾ.ಎ.ವಿ.ಚಂದ್ರಶೇಖರ್ ಮತ್ತು ನ್ಯಾ.ಶ್ರೀನಿವಾಸ್‌ಗೌಡ ಅವರಿದ್ದ ದ್ವಿ ಸದಸ್ಯ ಪೀಠ ಈ ಆದೇಶವನ್ನು ನೀಡಿದ್ದು, ಸಾಸಕರಿಗೆ ಹಾಗೂ ಸಂಸದರಿಗೆ ಮತ ಚಲಾಯಿಸುವ ಹಕ್ಕಿದ್ದು, ಅವರು ಪುರಸಭೆ ಅಥವಾ ನಗರಸಭೆಗಳ ಅಧ್ಯಕ್ಷರ ನೇಮಕಾತಿ ವೇಳೆ ಮತ ಚಲಾಯಿಸಬಹುದಾಗಿದೆ ಎಂದು ತೀರ್ಪು ನೀಡಿದೆ. 
 
ಇನ್ನು ಈ ಹಿಂದೆ ಬಸವ ಕಲ್ಯಾಣ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದ ವೇಳೆ ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಬೀದರ್ ಸಂಸದ ಭಗವಂತ್ ಖೂಬಾ ಅವರು ಮತ ಚಲಾಯಿಸಿದ್ದರು. ಇದನ್ನು ಪ್ರಶ್ನಿಸಿ ನಗರಸಭೆಯ ಕಾಂಗ್ರೆಸ್ ಸದಸ್ಯೆ ಶಹಜಹಾನ್ ಬೇಗಂ ಅವರು ಕಲಬುರ್ಗಿಯಲ್ಲಿನ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಹೆಚ್.ಜಿ.ರಮೇಶ್ ಶಾಸಕರಿಗೆ ಮತ್ತು ಸಂಸದರಿಗೆ ಮತ ಚಲಾಯಿಸುವ ಹಕ್ಕಿಲ್ಲ ಎಂದು ತೀರ್ಪಿತ್ತಿತ್ತು. ಇದೇ ಆದೇಶವನ್ನು ಜೆಡಿಎಸ್ ಸದಸ್ಯರೋರ್ವರು ಮತ್ತೆ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಡೆಸಿದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. 
 
ಇನ್ನು ನಗರಸಭೆ ಪರವಾಗಿ ವಾದ ಮಂಡಿಸಿದ್ದ ವಕೀಲ ಕಾಶೆಂಪೂರ್, ನಗರಸಭೆಗಳಲ್ಲಿ ನಡೆಯು ಯಾವುದೇ ವಿಶೇಷ ಅಥವಾ ಸಮಾನ್ಯ ಸಭೆಗಳಲ್ಲಿ ಶಾಸಕ ಮತ್ತು ಸಂಸದರೂ ಕೂಡ ಭಾಗವಹಿಸಬಹುದಾಗಿದ್ದು, ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಹೈಕೋರ್ಟ್ ಇಂದಿನ ತೀರ್ಪು ಶಾಸಕ ಮತ್ತು ಸಂಸದರ ಹಕ್ಕನ್ನು ಎತ್ತಿ ಹಿಡಿದಿದೆ ಎಂದರು. 

ವೆಬ್ದುನಿಯಾವನ್ನು ಓದಿ