ಮುರುಘಾಮಠ ಭೂಮಿ ಖರೀದಿ: ಸಿಬಿಐ ತನಿಖೆಗೆ ಅಬ್ರಹಾಂ ಒತ್ತಾಯ

ಮಂಗಳವಾರ, 16 ಸೆಪ್ಟಂಬರ್ 2014 (12:21 IST)
ಮುರುಘಾಮಠದ ಭೂಮಿ ಖರೀದಿಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್  ಮಠಕ್ಕೆ ಅನುಕೂಲ ಮಾಡಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ  ಟಿ.ಜೆ. ಅಬ್ರಹಾಂ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅಬ್ರಹಾಂ ಪ್ರಕರಣದಲ್ಲಿ ಜಗದೀಶ್ ಶೆಟ್ಟರ್  ತಪ್ಪು ಸಾಬೀತಾಗಿದ್ದು, ಕಾನೂನುಬಾಹಿರವಾಗಿ ಹಣ ನೀಡಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. 

ಹಣವನ್ನು ರಿಲೀಸ್ ಮಾಡುವುದಕ್ಕೆ ಮುಂಚೆ ಜಗದೀಶ್ ಶೆಟ್ಟರ್ ಮತ್ತು ಸಚಿವ ನಿರಾಣಿ ಅವರ ಗಮನಕ್ಕೆ ತಂದಿದ್ದರೂ ಭೂಮಿಯನ್ನು ಖರೀದಿ ಮಾಡಲಾಗಿದೆ. ಸರ್ಕಾರಕ್ಕೆ ಹೊರೆಯಾಗುವಂತೆ ಹಣ ಪಾವತಿ ಮಾಡಿದ್ದಾರೆ.  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ  34.36 ಕೋಟಿಸಾಲ ಪಾವತಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಲಿ.

ಯಾವ ಆಧಾರದ ಮೇಲೆ ಅಷ್ಟೊಂದು ಹಣ ನೀಡಿದ್ದಾರೆಂದು ಸ್ಪಷ್ಟಪಡಿಸಲಿ ಎಂದು ಅಬ್ರಹಾಂ ಹೇಳಿದ್ದಾರೆ. ಸಿಎಂ ಅವರನ್ನೂ ಸೇರಿಸಿಕೊಂಡು ಲೋಕಾಯುಕ್ತಕ್ಕೆ ದೂರು ನೀಡುವೆ ಎಂದು ಅಬ್ರಹಾಂ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ