ರಾಮಾಯಣ ಪರೀಕ್ಷೆಯಲ್ಲಿ ಟಾಪರ್ ಆದ ಮುಸ್ಲಿಮ್ ಬಾಲಕಿ

ಶುಕ್ರವಾರ, 12 ಫೆಬ್ರವರಿ 2016 (17:14 IST)
ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆಯೋ, ಸಹಿಷ್ಣತೆ ಇದೆಯೋ ಎಂಬ ಬಗ್ಗೆ ಒಂದು ಕಡೆ  ವ್ಯಾಪಕ ಚರ್ಚೆ, ವಾದ ವಿವಾದಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಫಾತಿಮಾತ್ ರಾಹಿಲಾನಂತಹವರು ನಮಗೆ ಧರ್ಮದ ನಿಜವಾದ ಅರ್ಥವನ್ನು ವ್ಯಾಖ್ಯಾನಿಸುವುದು ಹೇಗೆ ಎಂದು ತೋರಿಸಿಕೊಡುತ್ತಿದ್ದಾರೆ. 
 

 
ಹೌದು ಮಂಗಳೂರಿನ ಪುತ್ತೂರಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಶೇ. 93 ರಷ್ಟು ಅಂಕ ಪಡೆದು ಮೊದಲ ಸ್ಥಾನ ಗಳಿಸಿದ್ದಾಳೆ. 2015ರ ನವೆಂಬರ್ ತಿಂಗಳಲ್ಲಿ ಪುತ್ತೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ಈ ಪರೀಕ್ಷೆಯನ್ನು ನಡೆಸಿತ್ತು. 
 
ಮತ್ತೂ ವಿಶೇಷ ಸಂಗತಿ ಏನೆಂದರೆ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಫಾತಿಮಾತ್ ರಾಹಿಲಾ ರಾಮಾಯಣ ಮತ್ತು ಮಹಾಭಾರತದಲ್ಲಿ ಕೋರ್ಸ್‌ನ್ನು ಓದಲು ಕಾತುರಳಾಗಿದ್ದಾಳೆ.
 
ಸಂಪೂರ್ಣ ರಾಜ್ಯಕ್ಕೆ ಪ್ರಥಮಳಾಗಬೇಕು ಎಂದು ಪ್ರಯತ್ನ ನಡೆಸಿದ್ದಳು . ಆದರೆ ಸಾಧ್ಯವಾಗಲಿಲ್ಲ. ಅವಳ ಚಿಕ್ಕಪ್ಪನ ಪ್ರೋತ್ಸಾಹದಿಂದ ಅವಳು ಈ ಸಾಧನೆಯನ್ನು ಮಾಡಿದ್ದಾಳೆ ಫಾತಿಮಾತ್ ತಂದೆ ಇಬ್ರಾಹಿಂ ಹೇಳಿದ್ದಾರೆ. 
 
ಫಾತಿಮಾತ್ ತಂದೆ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ