ಪರಸ್ಪರ ಆರೋಪ: ರಿಯಾಜ್-ಅಶ್ವಿನ್ ಮುಖಾಮುಖಿ ವಿಚಾರಣೆ ಸಾಧ್ಯತೆ

ಬುಧವಾರ, 29 ಜುಲೈ 2015 (15:42 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಒಂದನೇ ಆರೋಪಿ ಅಶ್ವಿನ್ ರಾವ್ ಹಾಗೂ ಎರಡನೇ ಆರೋಪಿ ರಿಯಾಜ್ ಸಯ್ಯದ್ ಅವರು ಪರಸ್ಪರವಾಗಿ ದೂರಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 
 
ಇಂದು ವಿಚಾರಣೆ ವೇಳೆಯಲ್ಲಿ ಅಶ್ವಿನ್ ರಾವ್, ಎಲ್ಲಾ ಅವ್ಯವಹಾರಕ್ಕೂ ಕೂಡ ಸಯ್ಯದ್ ಅವರೇ ಹೊಣೆಗಾರರು, ಎಲ್ಲವೂ ಕೂಡ ಅವರ ನೇತೃತ್ವದಲ್ಲಿಯೇ ನಡೆಯುತ್ತಿತ್ತು ಎಂದು ಅಶ್ವಿನ್ ರಾವ್ ಹೇಳಿಕೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ರಿಯಾಜ್ ಅವರನ್ನೂ ಕೂಡ ವಿಚಾರಣೆಗೊಳಪಡಿಸಿದಾಗ ರಿಯಾಜ್ ಕೂಡ ಅಶ್ವಿನ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಯಾಗಿ ಆರೋಪಿಸಿದ್ದಾರೆ. 
 
ವಿಚಾರಣೆ ವೇಳೆ ರಿಯಾಜ್ ಹೇಳಿದೆ ಹೇಳಿಕೆಗಳು: 
ಸಾಹೇಬರ ಮಗ ಅಶ್ವಿನ್ ಆಗಾಗ ಕಚೇರಿಗೆ ಬರುತ್ತಿದ್ದರು. ಅಲ್ಲದೆ ನನ್ನ ಹಾಗೂ ಕಚೇರಿಯಲ್ಲಿನ ಸ್ಥಿರ ದೂರವಾಣಿಗಳನ್ನು ಬಳಸಿ ಕೆಲವರೊಂದಿಗೆ ಮಾತನಾಡುತ್ತಿದ್ದರು. ಆದರೆ ಅವರು ಯಾರೊಂದಿಗೆ ಮಾತನಾಡುತ್ತಿದ್ದರು ಎಂಬ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲದೆ ಆಗಾಗ ಪ್ರಮೋದ್ ಹಾಗೂ ಅಂಥೋನಿ ಕೂಡ ಆಗಮಿಸುತ್ತಿದ್ದರು ಎಂದಿದ್ದಾರೆ.   
 
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಇಬ್ಬರೂ ಕೂಡ ಪರಸ್ಪರವಾಗಿ ಆರೋಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಇಂದು ರಾತ್ರಿ ಪರಸ್ಪರವಾಗಿ ಮುಖಾಮುಖಿ ಭೇಟಿ ಮಾಡಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ