ಸ್ವಚ್ಛ ನಗರಿಯ ನಂಬರ್ ಒನ್ ಪಟ್ಟ ಉಳಿಸಿಕೊಂಡ ಮೈಸೂರು

ಸೋಮವಾರ, 15 ಫೆಬ್ರವರಿ 2016 (19:25 IST)
ಅರಮನೆ ನಗರಿ ಮೈಸೂರು ಈ ಬಾರಿಯೂ ಸಹ ದೇಶದಲ್ಲಿಯೇ ಪ್ರಥಮ ಸ್ವಚ್ಛ ನಗರಿ ಎಂಬ ನಂಬರ್ ಒನ್ ಪಟ್ಟ ಉಳಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ್ ಅಭಿಯಾನದಡಿ ಸುಮಾರು 73 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.
 
ಸಮೀಕ್ಷೆಯಲ್ಲಿ ಕರ್ನಾಟಕದ ಮೈಸೂರು ಪ್ರಥಮ ಸ್ಥಾನ, ಚಂಡೀಗಢ್ ದ್ವಿತೀಯ ಸ್ಥಾನ ಮತ್ತು ತಮಿಳುನಾಡಿನ ತಿರುಚಿರಾಪಳ್ಳಿ ನಂಬರ್ 3 ಸ್ಥಾನ ಪಡೆದುಕೊಂಡಿದೆ. ನವದೆಹಲಿ ನಂತರದ ಸ್ಥಾನದ ಪಡೆದುಕೊಂಡಿರುವುದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
 
ದೇಶದ ಸ್ವಚ್ಛ ನಗರಗಳ ಟಾಪ್ 10 ಪಟ್ಟಿಯಲ್ಲಿ 1)ಕರ್ನಾಟಕದ ಮೈಸೂರು, 2)ಚಂಡೀಗಢ್, 3)ತಮಿಳುನಾಡಿನ ತಿರುಚಿರಾಪಳ್ಳಿ, 4)ನವದೆಹಲಿಯ ಮುನ್ಸಿಪಲ್ ಕಾರ್ಫೋರೇಶನ್, 5)ವಿಶಾಖಪಟ್ಟಣಂ, 6)ಗುಜರಾತ್ ನ ಸೂರತ್, 7)ರಾಜ್ ಕೋಟ್, 8)ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್, 9)ಚಿಂಡ್ವಾಡ್ ಮತ್ತು 10) ಮಹಾರಾಷ್ಟ್ರದ ಗ್ರೇಟರ್ ಮುಂಬೈ ಸೇರಿದೆ. ಕೊಳಕು ನಗರಗಳ ಪಟ್ಟಿಯಲ್ಲಿ ಜಾರ್ಖಂಡ್ ನ ದನ್ ಭಾದ್ ಗೆ ಪ್ರಥಮ ಸ್ಥಾನ. 2.ಅಸಾನ್‌ಸೋಲ್ 3. ಇಟಾನಗರ್ 4.ಪಾಟ್ನಾ 5. ಮೀರತ್ 6.ರಾಯ್ ಪುರ 7. ಗಾಜಿಯಾಬಾದ್ 8. ಜಮ್‌ಶೆಡ್‌ಪುರ 9. ವಾರಾಣಸಿ 10 ಕಲ್ಯಾಣ್. 
 
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ದೇಶದಲ್ಲಿ 65ನೇ ಸ್ವಚ್ಚನಗರಿಯ ಸ್ಥಾನ ಸಿಕ್ಕಿದೆ ಎಂದು ವರದಿ ವಿವರಿಸಿದೆ.
ಕಳೆದ ಬಾರಿಯೂ ಭಾರತದ 476 ನಗರಗಳಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಅರಮನೆ ನಗರಿ ಮೈಸೂರು ಪ್ರಥಮ ಸ್ಥಾನ ಪಡೆದಿತ್ತು. 
 

ವೆಬ್ದುನಿಯಾವನ್ನು ಓದಿ