ಮೈತ್ರಿಯಾ-ಕಾರ್ತಿಕ್ ಮದುವೆ ಪ್ರಕರಣ: ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಗುರುವಾರ, 29 ಜನವರಿ 2015 (16:58 IST)
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ದಾಖಲಿಸಿರುವ  ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
 
ನ್ಯಾಯಾಮೂರ್ತಿ ಆರ್.ಬಿ. ಬೂದಿಹಾಳ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದ್ದು, ಪ್ರಕರಣದ ವಿಚಾರಣೆಯು ಇನ್ನೂ ಆರಂಭದ ಹಂತದಲ್ಲಿದ್ದು, ವಜಾಗೊಳಿಸಲು ಸಾಧ್ಯವಿಲ್ಲ ಎಂದಿದೆ. 
 
ನಟಿ ಹಾಗೂ ನೊಂದ ಯುವತಿ ಮೈತ್ರಿಯಾ, ಕಾರ್ತಿಕ್ ಗೌಡ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಮದುವೆ ದೃಢೀಕರಿಸಬೇಕೆಂದು ಕೋರಿ  ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸರಿಯಾದ ಸಾಕ್ಷಿಗಳಿಲ್ಲದ ಕಾರಣ ಕೋರ್ಟ್ ಮೈತ್ರಿಯಾ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮೈತ್ರಿಯಾ ಮತ್ತೆ ನ್ಯಾಯ ದೊರಕುವ ಭರವಸೆಯೊಂದಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಕಾರ್ತಿಕ್ ಕೂಡ ಪ್ರತಿಯಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪ್ರಸ್ತುತ ವಜಾಗೊಂಡಿದೆ. 

ವೆಬ್ದುನಿಯಾವನ್ನು ಓದಿ