ಕೆಎಂಎಫ್ ಅಧ್ಯಕ್ಷರಾಗಿ ನಾಗರಾಜ್ 2 ವರ್ಷಗಳ ಅವಧಿಗೆ ಆಯ್ಕೆ

ಬುಧವಾರ, 17 ಸೆಪ್ಟಂಬರ್ 2014 (11:38 IST)
ಕೆಎಂಎಫ್ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ  ನಾಗರಾಜ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲ 2 ವರ್ಷದ ಅವಧಿಗೆ ನಾಗರಾಜ್ ಆಯ್ಕೆಯಾಗಿದ್ದಾರೆ. ನಂತರ 3 ವರ್ಷದ ಅವಧಿಗೆ ಶಾಸಕ ರವೀಂದ್ರ ಅವರಿಗೆ ಅವಕಾಶ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಸಚಿವ ಮಹದೇವ್ ಪ್ರಸಾದ್ ಹೇಳಿದ್ದಾರೆ.

ನಾಗರಾಜ್ ರಾಮನಗರ ಒಕ್ಕೂಟದ  ನಿರ್ದೇಶಕರಾಗಿದ್ದಾರೆ. 2 ಅವಧಿಗೆ ಅಧಿಕಾರ ಹಂಚಿಕೆಯ ನಿರ್ಧಾರಕ್ಕೆ ಬರಲಾಗಿದ್ದರೂ ಮೊದಲ ಅವಧಿ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿತ್ತು. 
 
ಕೆಎಂಎಫ್ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ  ಸಹಕಾರಿ ಸಚಿವ ಹೆಚ್.ಎಸ್ ಮಹದೇವ ಪ್ರಸಾದ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್, ಟಿ.ಬಿ ಜಯಚಂದ್ರ ಮತ್ತು ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.
 
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವ ಪ್ರಸಾದ್, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಎಂ. ಪಿ ರವೀಂದ್ರ ಹಾಗೂ ನಾಗರಾಜ್ ಇಬ್ಬರು ಆಕಾಂಕ್ಷಿಗಳಾಗಿದ್ದು, ಅಧ್ಯಕ್ಷರನ್ನು ಯಾವುದೇ ವಿವಾದವಿಲ್ಲದೇ ಸುಸೂತ್ರವಾಗಿ ಆಯ್ಕೆ ಮಾಡಲಾಗುತ್ತದೆ. ಸೆ.17ರಂದು ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ