ಹೊಸ ತಿರುವು ಪಡೆದ ಪೊಲೀಸ್ ಠಾಣೆಯಲ್ಲಿನ ನಾಗಿನ್ ಡ್ಯಾನ್ಸ್ ಪ್ರಕರಣ

ಬುಧವಾರ, 3 ಫೆಬ್ರವರಿ 2016 (18:19 IST)
ಚಿಕ್ಕಬಳ್ಳಾಪುರ :  ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಂದ ನಾಗಿನ್ ಡ್ಯಾನ್ಸ್ ಮಾಡಿಸಿದ ಪ್ರಕರಣ ಹೊಸ ತಿರುವು ಪಡೆದಿದೆ. ಇದು ತೆಲುಗು ಆಕ್ಷನ್ ಕಾಮೆಡಿ  ಗಬ್ಬರ್ ಸಿಂಗ್‌ನಲ್ಲಿ  ಪೊಲೀಸ್ ಅಧಿಕಾರಿ ಪವನ್ ಕುಮಾರ್  ರೌಡಿಗಳು ಡ್ಯಾನ್ಸ್ ಮಾಡುವಾಗ ಅವರಿಂದ ಮಾಹಿತಿ ಹೊರತೆಗೆದ ಕತೆಯಂತಿದೆ.

ಆರೋಪಿಗಳ ಕೆಲವು ಡಕಾಯಿತಿಗಳು ಮತ್ತು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿ ಮತ್ತು ತುಮಕೂರುಜಿಲ್ಲೆಯಲ್ಲಿ ಕೊಲೆ ಪ್ರಕರಣ ಕುರಿತು ಬಾಯಿಬಿಡಿಸಲು ಅವರನ್ನು ನೃತ್ಯಕ್ಕೆ ಒಳಪಡಿಸಿದ್ದಾಗಿ ಎಸ್‌ಐ ಸುಂದರ್ ಹೇಳಿದ್ದಾರೆ. ಸುಮಾರು 6 ತಿಂಗಳ ಹಿಂದೆ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ನೃತ್ಯದ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
 
 ಆರೋಪಿಗಳಿಂದ ಅಪರಾಧಗಳ ಮಾಹಿತಿ ಹೊರಗೆಳೆಯಲು ಪೊಲೀಸರು ನಾನಾ ತಂತ್ರ ಬಳಸಿದರೂ ಯಶಸ್ವಿಯಾಗಿರಲಿಲ್ಲ. ಬಳಿಕ ಸುಂದರ್ ಆರೋಪಿಗಳನ್ನು ಅವರ ಹಾಬಿಗಳ ಕುರಿತು ಕೇಳಿದಾಗ ಚಿಟ್ಟಿಗೆರೆ ಗ್ರಾಮದ ಜ್ಞಾನ ಪ್ರತಾಪ್ ತಾನು ಡ್ಯಾನ್ಸ್ ಮಾಡುವುದಾಗಿ ಹೇಳಿದ್ದ. ಡ್ಯಾನ್ಸ್ ಮಾಡುತ್ತಿದ್ದಾಗ ಅವನು ಮಾಡಿದ ವಿವಿಧ ಅಪರಾಧಗಳನ್ನು ಬಹಿರಂಗ ಮಾಡಿದ ಎಂದು ಸುಂದರ್ ಹೇಳಿದ್ದಾರೆ. 
 
 ಇನ್ನೊಬ್ಬ ಕಟ್ಟಾ ಆರೋಪಿ ಪ್ರವೀಣ್ ಕೆಲವು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಭಯಭೀತಿ ಹುಟ್ಟಿಸಲು ಯೋಜಿಸಿದ ವಿಷಯವನ್ನು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬಾಯಿಬಿಟ್ಟಿದ್ದ. ಇವೆಲ್ಲಾ ಸಂತ್ಯಾಂಶಗಳನ್ನು ಉನ್ನತಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸುಂದರ್ ಹೇಳಿದ್ದಾರೆ.  ನಾವು ಆರೋಪಿಗಳ ಮೇಲೆ ಯಾವುದೇ ಒತ್ತಡ ಹಾಕಿರಲಿಲ್ಲ. ನಮಗೆ ಕಳಂಕ ತರುವುದಕ್ಕೆ ಯಾರೋ ಈ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ ಎಂದು ಸುಂದರ್ ಹೇಳಿದರು. 
 

ವೆಬ್ದುನಿಯಾವನ್ನು ಓದಿ