ನಮ್ಮ ಮೆಟ್ರೋ ರೈಲಿಗೆ ಕೆಂಪೇಗೌಡರ ಹೆಸರಿಡಲು ಅಭ್ಯಂತರವಿಲ್ಲ: ಸಿಎಂ

ಸೋಮವಾರ, 16 ನವೆಂಬರ್ 2015 (20:20 IST)
ನಮ್ಮ ಮೆಟ್ರೋ ರೈಲಿಗೆ ಕೆಂಪೇಗೌಡರ ಹೆಸರಿಡಲು ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಇಂದು ಮಾಗಡಿಯಿಂದ ಮೈಸೂರು ರಸ್ತೆಯವರೆಗೆ ಸಾಗಲಿರುವ 6.8 ಕಿ.ಮೀ ದೂರವನ್ನು ಕ್ರಮಿಸುವ ಮೆಟ್ರೋ ರೀಚ್ 2 ಉಧ್ಘಾಟಿಸಿದ ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮ ಮೆಟ್ರೋ ರೈಲಿಗೆ ಕೆಂಪೇಗೌಡರ ಹೆಸರಿಡಲು ಅಭ್ಯಂತರವಿಲ್ಲ . ಹೊಸಹಳ್ಳಿ ರೈಲು ನಿಲ್ದಾಣಕ್ಕೆ ಬಾಲಗಂಗಾಧರನಾಥ ಶ್ರೀಗಳು ಹೆಸರಿಡಬಹುದಾಗಿದೆ ಎಂದರು.
 
ಬಾಲಗಂಗಾಧರನಾಥ ಶ್ರೀಗಳು ಹೆಸರಿಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದ್ದಾರೆ. ನವೆಂಬರ್ 18 ರ ನಂತರ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.
 
ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವ ಪಶ್ಚಿಮ ಕಾರಿಡಾರ್ ಮೆಟ್ರೋ ರೀಚ್ 2ಗೆ ಹಸಿರು ನಿಶಾನೆ ತೋರಿದ್ದಾರೆ.
 
ಸುಮಾರು 6.8 ಕಿ.ಮೀ ದೂರದ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ 12 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಮೆಟ್ರೋ ರೈಲು ಅಧಿಕಾರಿಗಳು ತಿಳಿಸಿದ್ದಾರೆ.
 
ಮೆಟ್ರೋ ರೀಚ್ ಮಾರ್ಗದಲ್ಲಿ ಆರು ನಿಲ್ದಾಣಗಳಿದ್ದು  ಮಾಗಡಿ, ದೀಪಾಂಜಲಿ ನಗರ, ಹೊಸಹಳ್ಳಿ, ವಿಜಯನಗರ ಅತ್ತಿಗುಪ್ಪೆ ಮೈಸೂರು ರಸ್ತೆ ಮುಖಾಂತರ ಸಂಚರಿಸಲಿದೆ. 
 
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು 

ವೆಬ್ದುನಿಯಾವನ್ನು ಓದಿ