ಮೋದಿ ಸಂಪುಟದ 45 ಸಚಿವರಲ್ಲಿ 12 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್

ಗುರುವಾರ, 28 ಆಗಸ್ಟ್ 2014 (13:57 IST)
ಈಗ ಮೋದಿ ಅವರ ಸಂಪುಟದ 45 ಸಚಿವರಲ್ಲಿ 12 ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ಇಬ್ಬರ ವಿರುದ್ಧ (ಉಮಾ ಭಾರತಿ ಮತ್ತು ಜನರಲ್‌ ವಿ.ಕೆ.ಸಿಂಗ್‌) ದೋಷಾರೋಪ ಪಟ್ಟಿ ನಿಗದಿಯಾಗಿದೆ.
 
ಸಚಿವ ಸಂಪುಟ ಸೇರಿದ ಮರುವಾರವೇ ಅಪಘಾತದಲ್ಲಿ ನಿಧನರಾದ ಗೋಪಿನಾಥ್‌ ಮುಂಡೆ ಅವರ ವಿರುದ್ಧವೂ ಕ್ರಿಮಿನಲ್‌ ಪ್ರಕರಣಗಳು ಇದ್ದವು. 
 
ಚರ್ಚೆಗೆ ಅವಕಾಶ:  ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ರಾಜಸ್ತಾನದ ರಾಜ್ಯಪಾಲರಾಗಿ ನೇಮಕಗೊಂಡಿರುವ ಕಲ್ಯಾಣ್‌ ಸಿಂಗ್‌ ಅವರ ನೇಮಕಾತಿಯೂ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. 
 
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ಕಲ್ಯಾಣ್‌ ಸಿಂಗ್‌ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇಂತಹ ಪ್ರಕರಣದಲ್ಲಿ ದೋಷಾರೋಪಕ್ಕೆ ಗುರಿಯಾದವರನ್ನು ಅಥವಾ ಮೊಕದ್ದಮೆ ಎದುರಿಸುತ್ತಿರುವವರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಿಸುವುದರ ಬಗ್ಗೆ ಇದು ಚರ್ಚೆಯ ಬಿರುಗಾಳಿ ಎಬ್ಬಿಸಬಹುದು.

ವೆಬ್ದುನಿಯಾವನ್ನು ಓದಿ