ಉಗಾಂಡಾದ ಯುವತಿಗೆ ಚೂರಿಯಿಂದ ಇರಿದ ನೈಜೀರಿಯಾ ಯುವಕ

ಭಾನುವಾರ, 14 ಫೆಬ್ರವರಿ 2016 (16:03 IST)
ಬಂಜಾರಾ ಲೇಔಟ್ ಜಾಯ್ಸ್ ಹೊಟೆಲ್‌ನಲ್ಲಿ ಆಫ್ರಿಕನ್ ಉಗಾಂಡ ಯುವತಿಗೆ ಆಫ್ರಿಕಾದ ಯುವಕನೇ ಚೂರಿಯಿಂದ ಇರಿದ ಘಟನೆ ಸಂಭವಿಸಿದೆ. ಈ ಘಟನೆ  10ನೇ ತಾರೀಖಿನಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ಉಂಗಾಡಾ ಯುವತಿ ಶಕೀರಾ ಸ್ನೇಹಿತೆ ಗಿಪ್ಲೆಟಿನ್ ಜತೆ ಹೊಟೆಲ್‌ಗೆ ಆಗಮಿಸಿ ಮದ್ಯ ಹೀರುತ್ತಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ನೈಜೀರಿಯಾ ಪ್ರಜೆ ಒನ್ಸಾಸ್ ತನಗೆ ಮದ್ಯ ಆರ್ಡರ್ ಮಾಡುವಂತೆ ಆದೇಶಿಸಿದ. ಉಗಾಂಡ ಯುವತಿ ಶಕೀರಾ ತಾನು ಬಾರ್‌ನಲ್ಲಿ ಕೆಲಸ ಮಾಡುತ್ತಿಲ್ಲ. ನಾನು ಯಾರು ಗೊತ್ತಾ ಎಂದು ಪ್ರಶ್ನಿಸಿದ್ದಾಳೆ. ಆಗ ಒನ್ಸಾಸ್ ಶಕೀರಾಳನ್ನು ತಳ್ಳಿ ಹಲ್ಲೆ ಮಾಡಿದ. ಶಕೀರಾ ಓಡಿಹೋಗಿ ಕೊಠಡಿಯೊಂದರ ಬಾಗಿಲನ್ನು ಹಾಕಿಕೊಂಡಳು.

 ಸ್ವಲ್ಪ ಹೊತ್ತಿನ ನಂತರ ಶಕೀರಾ ಕೊಠಡಿಯ ಬಾಗಿಲು ತೆರೆದು ಹೊರಬಂದಾಗ ಒನ್ಸಾಸ್ ಅಲ್ಲೇ ಕಾದು ಕುಳಿತಿದ್ದು ಶಕೀರಾಗೆ ಚಾಕುವಿನಿಂದ ಚುಚ್ಚಿ ಓಡಿಹೋದ. ಗಾಯಗೊಂಡ ಶಕೀರಾಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ