ನಿರ್ಭಯಾ ಪ್ರಕರಣ: ಸಾಕ್ಷ್ಯಚಿತ್ರಕ್ಕಾಗಿ 40 ಸಾವಿರ ಹಣ ಪಡೆದಿದ್ದ ಆರೋಪಿ

ಶುಕ್ರವಾರ, 6 ಮಾರ್ಚ್ 2015 (17:40 IST)
ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಮುಖೇಶ್ ಸಿಂಗ್, ಇಂಡಿಯಾಸ್ ಡಾಟರ್‌ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಳ್ಳಲು 40 ಸಾವಿರ ರೂ. ಲಂಚ ಪಡೆದಿದ್ದಾನೆ ಎಂಬ ಸುದ್ದಿ ಬಹಿರಂಗವಾಗಿದೆ. 
 
ಈ 'ಇಂಡಿಯಾಸ್ ಡಾಟರ್‌' ಸಾಕ್ಷ್ಯಚಿತ್ರವನ್ನು ಬಿಬಿಸಿ ವಾಹಿನಿಯ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರು ನಿರ್ಮಿಸಿದ್ದು, ಇದರಲ್ಲಿ ಆರೋಪಿ ಸಿಂಗ್ ಪ್ರಮುಖವಾಗಿ ಕಾಣಿಸಿಕೊಂಡಿದ್ದ. ಆದರೆ ಕಾಣಿಸಿಕೊಳ್ಳಲು ತನಗೆ 2 ಲಕ್ಷ ನೀಡಬೇಕು ಎಂಬ ಬೇಡಿಕ್ಕೆ ಇಟ್ಟಿದ್ದ. ಆದರೆ ಬಳಿಕ ಆತನೇ 40 ಸಾವಿರಕ್ಕೆ ಒಪ್ಪಿಕೊಂಡಿದ್ದಾನೆ. ಈ ಮೊತ್ತವನ್ನು ಮುಕೇಶ್ ಸಿಂಗ್ ಕುಟುಂಬಸ್ಥರಿಗೆ ವಿತರಿಸಲಾಗಿದೆ ಎನ್ನಲಾಗಿದೆ. 
 
ಈ ವಿಷಯವನ್ನು ಪತ್ರಿಕೆಯೊಂದು ವರದಿ ಮಾಡಿದ್ದು, ಸಾಕ್ಷ್ಯಚಿತ್ರ ತಯಾರಿಕೆಗಾಗಿ ಮೊದಲು ಲೆಸ್ಲಿ ಉಡ್ವಿನ್, ಇದಕ್ಕೂ ಮುನ್ನವೇ ಹಲವು ಬಾರಿಪ್ರಯತ್ನ ನಡೆಸಿದ್ದರು. ಆದರೆ ಆಗ ಅನುಮತಿ ಸಿಗಲಿಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದರು. ಬಳಿಕ ಕುಲ್ಲಾರ್ ಎಂಬಾತನ ಮೂಲಕ ಗೃಹ ಸಚಿವಾಲಯ ಹಾಗೂ ತಿಹಾರ್ ಜೈಲು ಪ್ರವೇಶಕ್ಕೆ ಅನುಮತಿ ಪಡೆಯಲಾಯಿತು ಎಂದು ಪತ್ರಿಕೆ ವರದಿ ಮಾಡಿದೆ. 
 
2012ರ ಡಿಸೆಂಬರ್ 16 ರಂದು ರಾತ್ರಿ ನಿರ್ಭಯಾ ಎಂಬ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೇಲೆ 6 ಮಂದಿ ಅತ್ಯಾಚಾರ ಎಸಗಿ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನನ್ನು ಹತ್ಯೆಗೈದಿದ್ದರು. ಅಂದು ನಡೆದಿದ್ದ ಎಲ್ಲಾ ಸಂಗತಿಗಳನ್ನು ಸಿಂಗ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಎನ್ನಲಾಗಿದ್ದು, ಈ ವಿಡಿಯೋದ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

ವೆಬ್ದುನಿಯಾವನ್ನು ಓದಿ