ನಿತ್ಯಾನಂದ ಪುರುಷತ್ವ ಹೊಂದಿದ್ದಾನೆಂದು ವೈದ್ಯಕೀಯ ವರದಿಯಲ್ಲಿ ದೃಢ

ಬುಧವಾರ, 26 ನವೆಂಬರ್ 2014 (12:44 IST)
ನಿತ್ಯಾನಂದನ ವಿರುದ್ಧ ಪುರುಷತ್ವ ಪರೀಕ್ಷೆ ವರದಿ ಇಂದು ಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ನಿತ್ಯಾನಂದ ಪುರುಷನೆಂದು ಸಾಬೀತಾಗಿದೆ.  ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ನಿತ್ಯಾನಂದ ಪುರುಷನೆಂದು ದೃಢಪಟ್ಟಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

 ಸಿಐಡಿ ಪೊಲೀಸರು 31 ಪುಟಗಳ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ನಿತ್ಯಾನಂದ ವಯಸ್ಸಿಗೆ ತಕ್ಕಂತೆ ಅಂಗಾಂಗಗಳನ್ನು ಹೊಂದಿದ್ದಾನೆ. ಅವನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನೆಂದು ಸಾಬೀತುಮಾಡುವ ಯಾವುದೇ ವೈದ್ಯಕೀಯ ಆಧಾರವಿಲ್ಲ ಎಂದು ವರದಿ ತಿಳಿಸಿದೆ.

ತಾತ್ಕಾಲಿಕವಾಗಿ ನಪುಂಸಕನೆಂದು ತೋರಿಸಲು ನಿತ್ಯಾ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಆರತಿ ರಾವ್ ಎಂಬ ಆಶ್ರಮವಾಸಿ ನಿತ್ಯಾನಂದನ ವಿರುದ್ಧ  ಅತ್ಯಾಚಾರ ಪ್ರಕರಣದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದರಿಂದ ನಿತ್ಯಾನಂದ ತಾನು ಪುರುಷನಲ್ಲ, ಬಾಲಕ ಎಂದು ಹೇಳಿದ್ದ.

  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದನ ಪುರುಷತ್ವ ಪರೀಕ್ಷೆ  ನೆಫ್ರೋ ಯೂರಾಲಜಿ ಸಂಸ್ಥೆ ನಿರ್ದೇಶಕ ಸಿ.ಎಸ್. ನೆಫ್ರೋ ಮಾರ್ಗದರ್ಶನದಲ್ಲಿ  ನಡೆದಿತ್ತು. ತಜ್ಞ ವೈದ್ಯರ ತಂಡ ಪರೀಕ್ಷೆ ನಡೆಸಿ ವರದಿ ನೀಡಿದೆ. 
 

ವೆಬ್ದುನಿಯಾವನ್ನು ಓದಿ