ಛೆ..ಛೆ.. ಇಲ್ರಿ ಪ್ಲೀಸ್ ನಂಬಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿಲ್ಲ: ಸಚಿವ ತನ್ವೀರ್ ಸೇಠ್

ಗುರುವಾರ, 10 ನವೆಂಬರ್ 2016 (16:59 IST)
ಅಶ್ಲೀಲ ಚಿತ್ರ ವೀಕ್ಷಣೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ತನ್ವೀರ್ ಸೇಠ್, ಮೈಸೂರಿನಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಯ ಫೋಟೋಗಳನ್ನು ನೋಡುತ್ತಿದ್ದೆ ಹೊರತು ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ರಾಜ್ಯದ ಯಾವ ಯಾವ ಭಾಗಗಳಲ್ಲಿ ಟಿಪ್ಪು ಜಯಂತಿ ಹೇಗೆ ನಡೆತಿದೆ ಎನ್ನವ ಬಗ್ಗೆ ಮೊಬೈಲ್‌ನ ವಾಟ್ಸಪ್‌ನಲ್ಲಿ ಫೋಟೋಗಳನ್ನು ವೀಕ್ಷಿಸುತ್ತಿದ್ದೆ. ನಾನು ಉದ್ದೇಶಪೂರ್ವಕವಾಗಿ ಯಾವುದೇ ಅಶ್ಲೀಲ ಚಿತ್ರಗಳನ್ನು ನೋಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
 
ಟಿಪ್ಪು ಜಯಂತಿ ಆಚರಣೆಯ ವ್ಯತ್ಯಾಸಗಳ ಬಗ್ಗೆ ರಾಯಚೂರು ಸಂಸದ ನಾಯಕ್ ಅವರಿಗೆ ಮಾಹಿತಿ ನೀಡುತ್ತಿದ್ದೆ. ಮೈಸೂರಿನಲ್ಲಿ ನಡೆದ ಟಿಪ್ಪು ಜಯಂತಿ ಬಗ್ಗೆ ಫೋಟೋಗಳನ್ನು ತೋರಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
 
ಮೈಸೂರು ನಿವಾಸಿಯಾಗಿದ್ದರೂ ರಾಯಚೂರಿನಲ್ಲಿ ಟಿಪ್ಪು ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ಅಶ್ಲೀಲ ಚಿತ್ರಗಳನ್ನು ನಾನು ನೋಡಿಲ್ಲವಾದ್ದರಿಂದ ನನ್ನದು ಯಾವುದೇ ತಪ್ಪಿಲ್ಲ ಎಂದು ಸಚಿವ ತನ್ವೀರ್ ಸೇಠ್ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ