ನನ್ನ ತಂದೆ ಹೇಳಿಕೆಯಲ್ಲಿ ತಪ್ಪಿಲ್ಲ: ಮೆಹಬೂಬಾ ಮುಫ್ತಿ

ಸೋಮವಾರ, 2 ಮಾರ್ಚ್ 2015 (16:07 IST)
ಜಮ್ಮು ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ವಿವಾದ್ಾತ್ಮಕ ಹೇಳಿಕೆಯನ್ನು ಅವರ ಪುತ್ರಿ, ಸಂಸದೆ, ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸಮರ್ಥಿಸಿಕೊಂಡಿದ್ದು, ನನ್ನ ತಂದೆ ಹೇಳಿದ ಹೇಳಿಕೆಯಲ್ಲಿ ತಪ್ಪಿಲ್ಲ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಮೆಹಬೂಬಾ ಮುಫ್ತಿ, ತಮ್ಮ ತಂದೆ ಹೇಳಿರುವ ಮಾತಿನಲ್ಲಿ ತಪ್ಪಿಲ್ಲ. ಅವರು ಸರಿಯಾಗಿಯೇ ಮಾತನಾಡಿದ್ದಾರೆ ಎಂದಿದ್ದಾರೆ.

ನಿನ್ನೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಸಿಎಂ ಮುಫ್ತಿ, ಪಾಕಿಸ್ತಾನದ ಉಗ್ರಗಾಮಿಗಳು ಹಾಗೂ ಹುರಿಯತ್ ಸಂಘಟನೆಯ ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದ್ದರು ಎನ್ನುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.  
 

ವೆಬ್ದುನಿಯಾವನ್ನು ಓದಿ