ಧಮಕಿಗಳು ಎಂದಿಗೂ ನಡೆಯುವುದಿಲ್ಲ: ಮೋದಿ

ಮಂಗಳವಾರ, 3 ಮಾರ್ಚ್ 2015 (16:41 IST)
ಇಂದಿನ ರಾಜ್ಯಸಭಾ ಕಲಾಪದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ರಾಜಕೀಯ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿ ಬಹಳ ಮುಖ್ಯ, ಪ್ರಜಾಪ್ರಭುತ್ವದಲ್ಲಿ ಧಮಕಿಗಳು ಎಂದಿಗೂ ನಡೆಯುವುದಿಲ್ಲ. ನಡೆಯಲು ಸಾಧ್ಯವೂ ಇಲ್ಲ ಎಂದಿದ್ದಾರೆ.

ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ ಅವರು, ರಾಜಕೀಯ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿ ಬಹಳ ಮುಖ್ಯ, ಲೋಕತಂತ್ರದಲ್ಲಿ ಧಮಕಿಗಳು ಎಂದಿಗೂ ನಡೆಯುವುದಿಲ್ಲ. ನಡೆಯಲು ಸಾಧ್ಯವೂ ಇಲ್ಲ ಎಂದ ಅವರು, ಗುಜರಾತ್‌ನ ಹಳೆ ನೆನಪುಗಳನ್ನು ನೆನಪಿಸಿಕೊಂಡು ಗುಜರಾತ್‌ನಲ್ಲಿ ನನ್ನನ್ನು 14 ವರ್ಷಗಳ ಕಾಲ ಜೈಲಿಗಟ್ಟುತ್ತೇವೆ ಎಂದು ಧಮಕಿ ಹಾಕಿದ್ದರು. ನನಗೆ ಧಮಕಿ ಹಾಕಿದ್ದು ಯಾರು ಎಂಬದು ಎಲ್ಲರಿಗೂ ತಿಳಿದಿದೆ. ಸರ್ಕಾರ ಎಂಬುದು ಕಾನೂನಿನ ಚೌಕಟ್ಟಿನಲ್ಲಿ ಅದೇ ಮಾರ್ಗದಲ್ಲಿಯೇ ನಡೆಯಬೇಕಾಗುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ನಿಭಾಯಿಸಲು ಬಿಜೆಪಿ ಕೂಡ ಸಿದ್ಧವಿದೆ. ರಾಷ್ಟ್ರ ನಿರ್ಮಾಣವಾಗಿರುವುದು ಜನತೆಯಿಂದಲೇ ಹೊರತು ಸರ್ಕಾರದಿಂದಲ್ಲ ಎಂದರು.  
 
ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ಪ್ರಧಾನಿ ಮೋದಿ ಹೀಗೆ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ