ಜೆಡಿಎಸ್‌ ನಿರ್ನಾಮ ಯಾರಿಂದಲು ಸಾಧ್ಯವಿಲ್ಲ: ಸಿದ್ದುಗೆ ಕುಮಾರಣ್ಣ ತಿರುಗೇಟು

ಭಾನುವಾರ, 17 ಮೇ 2015 (14:23 IST)
ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳನ್ನು ಮುಗಿಸಲು ಅವರು ಯಾರು? ಯಾರಿಂದಲೂ ಜೆಡಿಎಸ್‌ ಅನ್ನು ಮುಗಿಸಲು ಸಾಧ್ಯವಿಲ್ಲ. ಇದನ್ನು ತೀರ್ಮಾನಿಸುವುದು ರಾಜ್ಯದ 6 ಕೋಟಿ ಜನ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಸಚಿವ ಡಿ.ಕೆ.ಶಿವಕುಮಾರ್ ನನ್ನ ಕಂತೆ ಪುರಾಣ ಹೊರಹಾಕುತ್ತೇನೆಂದು ಪುಂಖಾನುಪುಂಖವಾಗಿ ಭಾಷಣ ಮಾಡಿದ್ದಾರೆ. ಅದನ್ನು ಮೊದಲು ಹೊರಗೆ ಹಾಕಲಿ’ ಎಂದ ಅವರು, ‘ಈ ರೀತಿಯ ಹೆದರಿಕೆ ಬೆದರಿಕೆಗಳಿಗೆ ಬಗ್ಗುವ ಜಾಯಮಾನ ನನ್ನದಲ್ಲ’ ಎಂದರು.
 
ರಾಜಿ ಸಾಧ್ಯವಿಲ್ಲ: ‘ಶಿವಕುಮಾರ್‌ ಅವರು ನನ್ನೊಡನೆ ರಾಜಿ ಮಾಡಿಕೊಳ್ಳಲು ಹಿಂದೆ ದೆಹಲಿಯ ಕರ್ನಾಟಕ ಭವನಕ್ಕೆ ಬಂದಿ
 
ದ್ದರು. ನನ್ನ ಭೇಟಿಗಾಗಿ ಎರಡು ಗಂಟೆ ಕಾದಿದ್ದರು. ಆಗಲೇ ರಾಜಿ ಮಾಡಿಕೊಳ್ಳದ ನಾನು, ಮುಂದೆಯೂ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದರು.
 
ಬಿಬಿಎಂಪಿ ಚುನಾವಣೆ ಮೇಲೆ ಕಣ್ಣು: ಇಷ್ಟು ದಿನ ಸುಮ್ಮನಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಏಕಿ ಬೆಂಗಳೂರು ನಗರ ಸಂಚಾರ ಏಕೆ ಕೈಗೊಳ್ಳುತ್ತಿದ್ದಾರೆ. ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಕಣ್ಣಿರುವ ಕಾರಣ ಚುನಾವಣೆ ಗಿಮಿಕ್‌ ಮಾಡುತ್ತಿದ್ದಾರೆ ಎಂದರು.
 
ಹಣದ ಹೊಳೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಸಚಿವರು ಹಣದ ಹೊಳೆಯನ್ನೇ ಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಣದ ಆಮಿಷಕ್ಕೆ ಜನ ಬೆಲೆ ನೀಡುವುದಿಲ್ಲವೆಂಬ ವಿಶ್ವಾಸ ಇದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.
 

ವೆಬ್ದುನಿಯಾವನ್ನು ಓದಿ