ಮೂರು ದಶಕಗಳ ಕಾಲ ದೇಶದ ಗಡಿ ಕಾಯ್ದ ಸೈನಿಕನಿಗಿಲ್ಲ ರಕ್ಷಣೆ

ಬುಧವಾರ, 10 ಸೆಪ್ಟಂಬರ್ 2014 (10:43 IST)
28 ವರ್ಷಗಳ ಕಾಲ ದೇಶದ ಗಡಿ ಕಾಯ್ದ  ಸೈನಿಕನೊಬ್ಬನ ನಿವೃತ್ತ ಜೀವನದಲ್ಲಿ ಆತನಿಗೆ ರಕ್ಷಣೆ ಇಲ್ಲದಂತಾದ ವಿಪರ್ಯಾಸ, ಅವಮಾನಕರ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. 

ಮೈಸೂರಿನ  ನಿವಾಸಿಯಾಗಿರುವ ಹೈದರ್ ತಮಗೆ ಸೇರಿದ ನಿವೇಶನದಲ್ಲಿ ಮನೆ ಕಟ್ಟಿಸದಂತೆ ವ್ಯಕ್ತಿಯೊಬ್ಬ ಅವರಿಗೆ ಬೆದರಿಕೆ ಹಾಕುತ್ತಿದ್ದು ಸೂಕ್ತ ರಕ್ಷಣೆ ನೀಡುವಂತೆ ಹೈದರ್ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. 
 
ತಮಗೆ ಸೇರಿದ ಪಿತ್ರಾರ್ಜಿತ ಆಸ್ತಿಯ ನಿವೇಶನದಲ್ಲಿ  ಹೈದರ್ ಮನೆ ಕಟ್ಟಿಸುತ್ತಿದ್ದು, ಆ ನಿವೇಶನವನ್ನು ಅಲ್ಲೇ ಪಕ್ಕದಲ್ಲಿರುವ ಮಸೀದಿಗೆ ದಾನ ಮಾಡುವಂತೆ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ  ಸಯ್ಯದ್ ಎಂಬಾತ ಒತ್ತಡ ಹೇರುತ್ತಿದ್ದು, ಹೈದರ್ ಅವರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾನೆ. 
 
ಹೈದರ್ ವಿರುದ್ಧ ಕೋರ್ಟ್  ಮೆಟ್ಟಿಲೇರಿರುವ ಸಯ್ಯದ್ , ಸೈನಿಕನ ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳ್ಳುವಂತೆ ಮಾಡಿದ್ದಾರೆ.
 
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಯ್ಯದ್  1992ರಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಆರೋಪವನ್ನು ಎದುರಿಸುತ್ತಿದ್ದಾನೆ. 

ವೆಬ್ದುನಿಯಾವನ್ನು ಓದಿ