ಮೈತ್ರಿಯಾ ಮೇಲೆ ಅತ್ಯಾಚಾರದ ಯಾವುದೇ ಕುರುಹು ಇಲ್ಲ: ವೈದ್ಯಕೀಯ ವರದಿ

ಸೋಮವಾರ, 1 ಸೆಪ್ಟಂಬರ್ 2014 (16:09 IST)
ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಮತ್ತು ಮೈತ್ರಿಯಾ ಅವರ ವಿವಾಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮೈತ್ರಿಯ ವೈದ್ಯಕೀಯ ಪರೀಕ್ಷೆ ವರದಿ ಪೊಲೀಸರ ಕೈಸೇರಿದೆ. ಎರಡು ತಿಂಗಳ ಹಿಂದೆ ಮೈತ್ರಿಯಾ ದೈಹಿಕ ಸಂಪರ್ಕ ಹೊಂದಿದ್ದರು. ಆದರೆ ಅವರ ಮೇಲೆ ಅತ್ಯಾಚಾರ ನಡೆದಿರುವ ಯಾವುದೇ ಕುರುಹು ಇಲ್ಲ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

ಆದರೆ  ಕಾರ್ತಿಕ್ ಅವರನ್ನು ಕೂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಇದ್ದ  ಬಗ್ಗೆ ದೃಢೀಕರಣ ಸಿಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೈತ್ರಿಯಾ ದೈಹಿಕವಾಗಿ ಸಾಕಷ್ಟು ಬಳಲಿದ್ದಾಳೆಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ ಕಾರ್ತಿಕ್ ಗೌಡ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ  ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ