ರಾಜಧಾನಿಯಲ್ಲಿ ನಾಗಾಲ್ಯಾಂಡ್ ಮೂಲದ ಶಂಕಿತ ಉಗ್ರನ ಸೆರೆ

ಶನಿವಾರ, 24 ಜನವರಿ 2015 (08:36 IST)
ನಗರ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ನಗರದ ಕಾಟನ್‌ಪೇಟೆಯಲ್ಲಿ ದಾಳಿ ನಡೆಸಿದ್ದು,  ಬೋಡೊ ಶಂಕಿತ ಉಗ್ರನೋರ್ವನನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಗುಪ್ತಚರ ಇಲಾಖೆ ಹಾಗೂ ಅಸ್ಸಾಂ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಶಂಕಿತ ಉಗ್ರನನ್ನು ಬಂಧಿಸಿದ್ದು, ಆತ ನಾಗಾಲ್ಯಾಂಡ್ ಮೂಲದವನು ಎಂದು ತಿಳಿದು ಬಂದಿದೆ. ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಈ ಶಂಕಿತ ಉಗ್ರನನ್ನು ಇಲಾಖಾ ಪೊಲೀಸರು ಬೆಳ್ಳಂಬೆಳಗ್ಗೆ ಬಂಧಿಸಿದ್ದು, ಆತನನ್ನು ವಿಶೇಷ ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದರು. 
 
ಇತ್ತೀಚೆಗೆ ಉಗ್ರ ಸಂಘಟನೆಗಳ ಉಪಟವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದೆಲ್ಲೆಡೆ ಹದ್ದಿನ ಕಣ್ಣಿರಿಸಿದ್ದು, ರೆಡ್ಡಿ ನೇತೃತ್ವದ ಪೊಲೀಸ್ ತಂಡ ಇತ್ತೀಚೆಗಷ್ಟೇ ಭಟ್ಕಳ ಮೂಲದ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿತ್ತು. 

ವೆಬ್ದುನಿಯಾವನ್ನು ಓದಿ