ಬ್ಯಾಂಡೇಜ್ ಬಿಚ್ಚುವಾಗ ನರ್ಸ್ ಯಡವಟ್ಟು: ಮಗುವಿನ ಬೆರಳು ಕಟ್

ಬುಧವಾರ, 7 ಅಕ್ಟೋಬರ್ 2015 (20:33 IST)
ನರ್ಸ್ ನಿರ್ಲಕ್ಷ್ಯಕ್ಕೆ ಮಗುವಿನ ಬೆರಳು ಕಟ್ ಆಗಿರುವ ಪ್ರಸಂಗ ವರದಿಯಾಗಿದೆ. ಬ್ಯಾಂಡೇಜನ್ನು ಕತ್ತರಿಯಿಂದ ಕತ್ತರಿಸುವಾಗ ನರ್ಸ್ ಜ್ಯೋತಿ ಎಂಬವರು ಮಗುವಿನ ಬೆರಳನ್ನೇ ಕಟ್ ಮಾಡಿದ್ದಾರೆ. ಶಿವಮೊಗ್ಗದ ವಿಘ್ನೇಶ್ವರ ಆಸ್ಪತ್ರೆಯಲ್ಲಿ  ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಮಗುವಿಗೆ ಡ್ರಿಪ್ಸ್ ಹಾಕುವುದಕ್ಕೆ ಸೂಜಿಯಿಂದ ಚುಚ್ಚಿ ಬ್ಯಾಂಡೇಜ್ ಹಾಕಲಾಗಿತ್ತು.

ಬ್ಯಾಂಡೇಜ್ ತೆಗೆಯುವುದಕ್ಕೆ ಉದ್ದನೆಯ ಕತ್ತರಿ ತೆಗೆದುಕೊಂಡ ನರ್ಸ್ ಜ್ಯೋತಿ ಬ್ಯಾಂಡೇಜ್ ಕತ್ತರಿಸುವಾಗ ಅಚಾತುರ್ಯದಿಂದ ಕೈಬೆರಳಿಗೆ ಕತ್ತರಿ ಪ್ರಯೋಗ ಮಾಡಿದ್ದರಿಂದ ಕೈಬೆರಳು ತುಂಡಾಗಿತ್ತು.  ಈ ವಿಚಾರವು ಗಮನಕ್ಕೆ ಬರುತ್ತಿದ್ದಂತೆ ರಕ್ತಸ್ರಾವ ನಿಲ್ಲಲು ವೈದ್ಯರು ತಾತ್ಕಾಲಿಕ ಚಿಕಿತ್ಸೆ ನೀಡಿದರು.

ತುಂಡಾದ ಬೆರಳನ್ನು ಪುನಃ ಜೋಡಿಸಿದರೆ ಜೀವಕ್ಕೆ ಅಪಾಯವಾಗಬಹುದು  ಎಂದು ವೈದ್ಯರು ಹೇಳಿದ್ದರಿಂದ ಬೆರಳನ್ನು ಹಾಗೇ ಬಿಡಲಾಯಿತು. ವಿಘ್ನೇಶ್ವರ ಆಸ್ಪತ್ರೆಯಲ್ಲಿ ನರ್ಸ್ ತೋರಿದ ಬೇಜವಾಬ್ದಾರಿಯಿಂದ ಮಗು ಈಗ ಬೆರಳನ್ನು ಕಳೆದುಕೊಂಡು ಅಂಗವಿಕಲತೆಗೆ ಒಳಗಾಗಿದೆ. ನರ್ಸ್ ಜ್ಯೋತಿಯ ಬೇಜವಾಬ್ದಾರಿಯಿಂದ ಕೆಲಸ ಕಳೆದುಕೊಂಡಿದ್ದಾಳೆ. 
 

ವೆಬ್ದುನಿಯಾವನ್ನು ಓದಿ