ಮಕ್ಕಳಿಗೆ ಪಶುಗಳ ಇಂಜೆಕ್ಷನ್ ನೀಡಿದ ನರ್ಸ್

ಬುಧವಾರ, 24 ಫೆಬ್ರವರಿ 2016 (16:18 IST)
ಕೋಲಾರ ಜಿಲ್ಲೆಯ ನಕ್ಕಲಗೂಡು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥಳಾದ ಮಹಿಳಾ ನರ್ಸ್‌, 12 ಮಕ್ಕಳಿಗೆ ಪಶುಗಳ ಇಂಜೆಕ್ಷನ್ ನೀಡಿದ ಹೇಯ ಘಟನೆ ವರದಿಯಾಗಿದೆ
 
ಮನೆಮನೆಗೆ ತೆರಳಿ ತಾನು ನರ್ಸ್ ಎಂದು ಹೇಳಿಕೊಂಡ 13 ವರ್ಷದ ಮಾನಸಿಕ ಅಸ್ವಸ್ಥೆ ಶೈಲಜಾ , ಪುಟ್ಟ ಪುಟ್ಟ ಮಕ್ಕಳಿಗೆ, ಪಶುಗಳಿಗೆ ನೀಡುವ ಇಂಜೆಕ್ಷನ್ ನೀಡಿದ್ದಾಳೆ.
 
ಪಶುಗಳಿಗೆ ನೀಡುವ ಮೆಲಾಕ್ಸಿಕೋಮ್ ಎನ್ನುವ ಇಂಜೆಕ್ಷನ್‌ನನ್ನು ಮಕ್ಕಳಿಗೆ ನೀಡಿದ್ದಾಳೆ ಎಂದು ಪಶುವೈದ್ಯರು ತಿಳಿಸಿದ್ದಾರೆ. 
 
ಗ್ರಾಮಸ್ಥರು ಆಕೆಯನ್ನು ನಂಬದಿದ್ದಾಗ ಶೈಲಜಾ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಎಂಬಾತನಿಗೆ ಕರೆ ಮಾಡಿ ತಾನು ನರ್ಸ್ ಎನ್ನುವುದನ್ನು ಗ್ರಾಮಸ್ಥರಿಗೆ ಹೇಳುವಂತೆ ಕೋರಿದ್ದಾಳೆ.
 
ಶೈಲಜಾ ಇಂಜೆಕ್ಷನ್ ನೀಡಿದ 12 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಗ್ರಾಮಗಳಲ್ಲಿರುವ ಅನಕ್ಷರಸ್ಥ ಕುಟುಂಬಗಳ ಮನೆ ಮನೆಗೆ ತೆರಳಿ, ತಾನು ಆಸ್ಪತ್ರೆಯ ನರ್ಸ್ ಎಂದು ಹೇಳಿಕೊಂಡು ವಂಚಿಸಿದ್ದಾಳೆ. ಆಕೆಯ ವರ್ತನೆಯಿಂದ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶೈಲಜಾಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ