ತೈಲ ವಹಿವಾಟು ಸ್ಥಗಿತ: ಬೆಳಗಾವಿಯಲ್ಲಿ ಪೆಟ್ರೋಲ್‌ಗೆ ಹೆಚ್ಚಿದ ಬೇಡಿಕೆ

ಗುರುವಾರ, 23 ಏಪ್ರಿಲ್ 2015 (18:47 IST)
ರಾಷ್ಟ್ರೀಯ ತೈಲ ಕಂಪನಿಗಳು ತಮ್ಮ ದೈನಂದಿನ ಚಟುವಟಿಕೆಯನ್ನು ನಿಲ್ಲಿಸಿರುವ ಪರಿಣಾಮ ತೈಲ ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿರುವ ಪರಿಣಾಮ ನಗರದಲ್ಲಿನ ಶೇ. 50ರಷ್ಟು ಪೆಟ್ರೋಲ್ ಬಂಕ್‌ಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. 
 
ನಗರದ ಸದಾಶಿವನಗರದಲ್ಲಿನ ಬಂಕ್ ಗಲೂ ಸೇರಿದಂತೆ ಹಲವು ಬಂಕ್‌ಗಳು ಇಂದು ಸ್ಥಗಿತಗೊಂಡಿದ್ದು, ಕೆಲವೆಡೆ ನೋ ಸ್ಟಾಪ್ ಎಂಬ ಸೂಚನಾ ಫಲಕಗಳನ್ನೂ ಕೂಡ ಹಾಕಲಾಗಿದೆ. ಪರಿಣಾಮ ನಗರಾದ್ಯಂತ ಪೆಟ್ರೋಲ್ ಹಾಗೂ ಡೀಸಲ್ ತೈಲಕ್ಕೆ ಅತಿಯಾದ ಬೇಡಿಕೆ ಕಾಣಿಸಿಕೊಂಡಿದೆ. ಅಲ್ಲದೆ ಕೆಲವೆಡೆ ಈಗಾಗಲೇ ತೈಲವು ಸಂಪೂರ್ಣವಾಗಿ ಖಾಲಿಯಾಗಿದ್ದು, ಪ್ರಯಾಣಿಕರು ಪರಿತಪಿಸುವಂತಾಗಿದೆ. 
 
ರಾಷ್ಟ್ರೀಯ ತೈಲ ಕಂಪನಿಗಳು ಕಳೆದ ಎರಡು ದಿನಗಳಿಂದ ತಮ್ಮ ದೈನಂದಿನ ವಹಿವಾಟುಗಳನ್ನು ಸ್ಥಗಿತಗೊಳಿಸಿವೆ. ಈ ಪರಿಣಾಮ ತೈಲದ ಕೊರತೆ ತಲೆದೋರಿದ್ದು, ಬೆಳಗಾವಿ ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.    

ವೆಬ್ದುನಿಯಾವನ್ನು ಓದಿ