ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಓಂಪ್ರಕಾಶ್ ಅಧಿಕಾರ ಸ್ವೀಕಾರ

ಶನಿವಾರ, 28 ಫೆಬ್ರವರಿ 2015 (18:47 IST)
ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾಗಿರುವ ಪೊಲೀಸ್ ಮಹಾ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು ನಿರ್ಗಮಿತ ಡಿಜಿ&ಡಿಐಜಿ ಪಚಾವೊ ಅವರಿಂದ ಇಂದು ನಗರದ ನೃಪತುಂಗ ಬಡಾವಣೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. 
 
ಈ ಹುದ್ದೆ ನೇಮಕಕ್ಕಾಗಿ ನಾಲ್ವರ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಕ್ಕೆ ರವಾನಿಸಿತ್ತು. ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಸುಶಾಂತ್ ಮಹಾಪಾತ್ರ, ಬಿಪಿನ್ ಗೋಪಾಲಕೃಷ್ಣ, ಆರ್.ಕೆ.ದತ್ತಾ ಹಾಗೂ ಓಂ ಪ್ರಕಾಶ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಈ ಬಗ್ಗೆ ಸಭೆಗಳನ್ನು ನಡೆಸಿದ್ದ ಸರ್ಕಾರ, ಅಂತಿಮವಾಗಿ ಓಂ ಪ್ರಕಾಶ್ ಅವರ ಹೆಸರನ್ನು ಪ್ರಕಟಿಸಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಓಂ ಪ್ರಕಾಶ್ ಅವರ ನೇಮಕವನ್ನು ಘೋಷಿಸಿ ನೇಮಕ ಪತ್ರವನ್ನೂ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಓಪ್ರಕಾಶ್ ಇಂದು ಅಧಿಕಾರ ವಹಿಸಿಕೊಂಡರು. 
 
ಅಧಿಕಾರ ಹಸ್ತಾಂತರ ಕಾರ್ಯಕ್ರಮವು ನಗರದ ನೃಪತುಂಗ ಬಡಾವಣೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆಯಿತು. ನಿರ್ಗಮಿತ ಡಿಜಿ&ಡಿಐಜಿ ಪಚಾವೋ ಅವರು ಅಧಿಕಾರ ಹಸ್ತಾಂತರಿಸಿದರು. 
 
ಇನ್ನು ನೂತನ ಡಿಜಿ & ಡಿಐಜಿ ಓಂ ಪ್ರಕಾಶ್ ಅವರು 1981ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು, ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು. 

ವೆಬ್ದುನಿಯಾವನ್ನು ಓದಿ