ನೀರಿಗಾಗಿ ಪ್ರತಿಭಟಿಸಿದ ದಲಿತರಿಗೆ ಒಂದೂವರೆ ವರ್ಷ ಬಹಿಷ್ಕಾರ: ಸಂಧಾನ ಸಭೆ

ಸೋಮವಾರ, 5 ಅಕ್ಟೋಬರ್ 2015 (15:42 IST)
ಕಳೆದ ಒಂದೂವರೆ ವರ್ಷಗಳಿಂದ ಗ್ರಾಮದಲ್ಲಿ ಅಸ್ಪೃಶ್ಯತೆ ತಲೆದೋರಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಬಾ ನಂದಗಡ ಎಂಬ ಗ್ರಾಮದ ದಲಿತರು ಹಾಗೂ ಸುವರ್ಣೀಯರನ್ನು ಒಗ್ಗೂಡಿಸಿ ತಾಲೂಕಿನ ಉಪ ವಿಭಾಗಾಧಿಕಾರಿ ರಾಜಶ್ರೀ ಜೈನಾಪುರ ಅವರ ನೇತೃತ್ವದಲ್ಲಿ ಇಂದು ಅನುಸಂಧಾನ ಸಭೆ ನಡೆಸಲಾಗಿದೆ.  
 
ಹೌದು, ಕುಡಿಯುವ ನೀರಿಗಾಗಿ ಪ್ರತಿಭಟಿಸಿದರು ಎಂಬ ಕಾರಣಕ್ಕೆ ಗ್ರಾಮದ ದಲಿತ ಸಮುದಾಯದವರನ್ನು ಕಳೆದ ಒಂದೂವರೆ ವರ್ಷಗದಿಂದಲೂ ಕೂಡ ನೀರಿಗೆ ಬರದಂತೆ ಬಹಿಷ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅಸ್ಪೃಶ್ಯತಾ ಆಚಱಣೆಯನ್ನು ನಿಲ್ಲಿಸುವಂತೆ ಹಾಗೂ ದಲಿತರಿಗೆ ಮತ್ತೊಮ್ಮೆ ನೀರಿಗಾಗಿ ಬಹಿಷ್ಕಾರ ಹಾಕದಂತೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. 
 
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮಾ ಸಾಲಿಗೌಡರ, ತಾಲೂಕಿನ ತಹಶೀಲ್ದಾರ್ ಎಂ.ಎನ್.ಬಳಿಗಾರ ಸೇರಿದಂತೆ ತಾಲೂಕಿನ ಇತರೆ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ