ಸುರೇಶ್‌ಗೆ ಸ್ನೇಹಿತ ರಮೇಶ್ ಕಡೆಯಿಂದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಪರಿಚಯವಾಗಿತ್ತು. ತಮ್ಮ ಬಳಿ ಇದ್ದ ಕಪ್ಪು ಹಣವನ್ನು ಕಮಿಷನ್ ಲೆಕ್ಕದಲ್ಲಿ ಹೊಸ ನೋಟುಗಳಿಗೆ ಬದಲಾಯಿಸಿಕೊಡುವಂತೆ ಭೀಮಾನಾಯ್ಕ್ ಕೋರಿದ್ದರು. ಇದಕ್ಕಾಗಿ ಸುರೇಶ್, ನಾರಾಯಣ ಹಾಗೂ ದೀಪು ಎನ್ನುವವರನ್ನು ಸಂಪರ್ಕಿಸಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಕಮಿಷನ್ ವ್ಯವಹಾರದಲ್ಲಿ ವ್ಯತ್ಯಾಸದಿಂದಾಗಿ ಡೀಲ್ ಕುದರಿರಲಿಲ್ಲ. ಈ ವೇಳೆ 8 ಲಕ್ಷಕ್ಕೂ ಅಧಿಕ ಹಣ ನಾಪತ್ತೆಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಭೀಮಾನಾಯ್ಕ್ ತಮ್ಮ ಸಂಗಡಿಗರಿಂದ ನಮ್ಮನ್ನು ಅಪಹರಿಸಿ ಹಲ್ಲೆ ನಡೆಸಿದ್ದರು ಎಂದು ರಮೇಶ್ ಸ್ನೇಹಿತ ಸುರೇಶ್ ದೂರು ದಾಖಲಿಸಿದ್ದಾರೆ.