ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ

ಶುಕ್ರವಾರ, 28 ನವೆಂಬರ್ 2014 (11:32 IST)
ರಾಮನಗರದ  ಮಾಗಡಿ ತಾಲೂಕಿನ ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಸ್ತೆಗೆ ಅಡ್ಡಲಾಗಿ ಮಲಗಿ ಮಹಿಳೆಯರು ಪ್ರತಿಭಟನೆ ವ್ಯಕ್ತಪಡಿಸಿದರು. ಸರ್ವೇ ಕಾರ್ಯಕ್ಕೆ ಮುಂದಾದಾಗ ಗ್ರಾಮಸ್ಥರು ಸಿಟ್ಟಿಗೆದ್ದು ಪ್ರತಿಭಟನೆ ಮಾಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ  ಪೊಲೀಸರು ಲಾಠಿ ಪ್ರಹಾರ ಮಾಡಿದರು.

ಗೊರೂರಿನಲ್ಲಿ ಪುರಾತನ ದೇವಾಲಯವಿದ್ದು, ರೈತರ ಜಮೀನುಗಳು ಕೂಡ ಇವೆ. ಇಲ್ಲಿ ಬೆಂಗಳೂರಿನಿಂದ ಕಸ ತಂದು ಸುರಿಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆಂದು ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಸರ್ವೇ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಕಲ್ಲುತೂರಿ ಪ್ರತಿಭಟಿಸಿದರು. ಒಬ್ಬ ಅಧಿಕಾರಿಯೊಬ್ಬರ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ಮಾಡಿದ ಘಟನೆ ನಡೆಯಿತು. ಗ್ರಾಮಸ್ಥರು ಕಲ್ಲುತೂರಿದ್ದರಿಂದ ಆಂಬ್ಯುಲೆನ್ಸ್ ಗಾಜು ಪುಡಿ, ಪುಡಿಯಾಯಿತು.

ವೆಬ್ದುನಿಯಾವನ್ನು ಓದಿ