ಪರಮೇಶ್ವರ್ ನಾಯ್ಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ

ಭಾನುವಾರ, 31 ಜನವರಿ 2016 (11:08 IST)
ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಪರಮೇಶ್ವರ್ ನಾಯ್ಕ್ ಅವರ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ರಾಜ್ಯನಾಯಕರಿಗೆ ಸೂಚಿಸಿದೆಯೆಂದು ಹೇಳಲಾಗುತ್ತಿದೆ.

ಸಚಿವ ಪರಮೇಶ್ವರ ನಾಯಕ್ ವಿರುದ್ಧ ಆಕ್ರೋಶಗೊಂಡಿರುವ ಕಾಂಗ್ರೆಸ್ ಸಚಿವ ಸ್ಥಾನದಿಂದ ಅವರನ್ನು ತೆರವುಗೊಳಿಸಿ ಪರಿಸ್ಥಿತಿ ನಿಭಾಯಿಸುವಂತೆ ಹೈಕಮಾಂಡ್ ಸೂಚಿಸಿರುವುದಾಗಿ ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಬುಧವಾರದೊಳಗೆ ಪರಮೇಶ್ವರ್ ರಾಜೀನಾಮೆ ನೀಡುವ ಸಾದ್ಯತೆಯಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಚ್.ಸಿ. ಮಹದೇವಪ್ಪ ಪರಮೇಶ್ವರ ನಾಯ್ಕ್ ರಾಜೀನಾಮೆ ಕೇಳಿರುವುದು ಗೊತ್ತಿಲ್ಲ. ಕೇವಲ ಅಂತೆ ಕಂತೆಗಳನ್ನಿಟ್ಟು ಪರಮೇಶ್ವರ್ ರಾಜೀನಾಮೆ ಕೇಳಲಾಗುತ್ತಿದೆ. ವರ್ಗಾವಣೆ ಅಧಿಕಾರ ಪರಮೇಶ್ವರ್ ನಾಯ್ಕ್ ಅವರಿಗಿಲ್ಲ ಎಂದೂ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ