ಪರಮೇಶ್ವರ್ ಸಿಎಂ ಆಗಬೇಕೆಂಬುದು ಹೆಬ್ಬಯಕೆ: ರುದ್ರಮುನಿಶ್ರೀ

ಬುಧವಾರ, 25 ಫೆಬ್ರವರಿ 2015 (14:20 IST)
ದಲಿತ ಸಮುದಾಯದ ಪ್ರತಿನಿಧಿಯಾಗಿರುವ ರಾಜ್ಯದ ಪ್ರಾದೇಶಿಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಕೇವಲ ದಲಿತ ಸಮುದಾಯಕ್ಕೆ ಸೀಮಿತವಾಗಿಲ್ಲದೆ ರಾಜ್ಯಎಲ್ಲಾ ಸಮುದಾಯಕ್ಕೂ ಸಂಬಂಧಿಸಿದ್ದು, ಅವರು  ಮುಖ್ಯಮಂತ್ರಿಯಾಗುವ ಅಗತ್ಯವಿದೆ. ಹಾಗಾಗಿ ಅವರಿಗೆ ನಮ್ಮ ಯುವ ಮಠಾಧಿಪತಿಗಳ ಬೆಂಬಲಿವಿದೆ ಎಂದು ನಗರದ ಷಡಕ್ಷರಿ ಮಠದ ಪೀಠಾಧ್ಯಕ್ಷ ರುದ್ರಮುನಿ ಶ್ರೀ ಅವರು ಇಂದು ಅಭಿಪ್ರಾಯ ವ್ಯಕ್ತಪಡಿಸಿದದ್ದಾರೆ.
 
ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರು ತುಮಕೂರಿಗೆ ಸಂಬಂಧಿಸಿದವರು ಅಥವಾ ದಲಿತ ಸಮುದಾಯದ ಒಕ್ಕೊರಲಿಗೆ ನಾನು ಧನಿಗೂಡಿಸುತ್ತಿದ್ದೇನೆ ಎಂದು ತಿಳಿಯಬಾರದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಅವರ ಪಾತ್ರ ಬಹಳ ಮಹತ್ವದ್ದು, ಅವರು ಸಜ್ಜನಿಕೆವುಳ್ಳವರು, ಅವರಿಗೆ ಒಮ್ಮೆಯಾದರೂ ರಾಜ್ಯದ ಸಿಎಂ ಸ್ಥಾನ ನೀಡಬೇಕು ಎಂಬುದು ನಮ್ಮ ಹೆಬ್ಬಯಕೆ. ಇದಕ್ಕೆ ಹಿರಿಯ ಮಠಾಧಿಪತಿಗಳು ಬೇಸರಿಸಿಕೊಂಡರೂ ಕೂಡ ನಮಗೆ ಬೇಜಾರಿಲ್ಲ. ಪರಮೇಶ್ವರ್ ಅವರ ಬೆಂಬಲಕ್ಕೆ ಯುವ ಮಠಾಧೀಶರಾದ ನಾವು ಸಾಥ್ ನೀಡಲಿದ್ದೇವೆ ಎಂದು ತಿಳಿಸಿದರು. 
 
ಕಳೆದ ಹಲವು ದಿನಗಳಿಂದ ದಲಿತ ಸಂಘಟನೆಗಳ ಮುಖಂಡರೂ ಕೂಡ ಈ ಬಗ್ಗೆ ತಮ್ಮ ನಾಯಕನಿಗೆ ಸಿಎಂ ಸ್ಥಾನ ನೀಡಬೇಕೆಂದು ಹಲವು ಸಭೆಗಳನ್ನು ಹಮ್ಮಿಕೊಳ್ಳುವ ಮೂಲಕ ಒಕ್ಕೊರಲಿನಿಂದ ಧ್ವನಿ ಎತ್ತಿದ್ದರು. ಅಲ್ಲದೆ ಪರಮೇಶ್ವರ್ ಅವರೂ ಕೂಡ ನಾನೂ ಹುದ್ದೆ ಅರ್ಹನಾಗಿದ್ದೇನೆ ಎಂದು ನನಗೂ ಅನುಸುತ್ತದೆ. ಮುಖಂಡರು ಪದವಿ ಕೇಳುವುದು ತಪ್ಪೇ ಎನ್ನುವ ಮೂಲಕ ಸಿಎಂ ಗದ್ದುಗೆ ಮೇಲಿನ ತಮ್ಮ ಆಸೆ ಹಾಗೂ ಉತ್ಸಾಹವನ್ನು ಹೊರ ಹಾಕಿದ್ದರು. ಪ್ರಸ್ತುತ ಸ್ವಾಮೀಜಿಗಳೂ ಕೂಡ ಈ ರೀತಿಯಾಗಿ ನುಡಿದಿರುವುದು ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದರೆ ತಪ್ಪಾಗಲಾರದು. 

ವೆಬ್ದುನಿಯಾವನ್ನು ಓದಿ